ಕಲಬುರಗಿ: 2025ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ರೈತರು ತಮ್ಮ ಸಮೀಪದ ಗ್ರಾಮ್ ಒನ್, ಸಿಎಸ್‌ಸಿ ಕೇಂದ್ರ, ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರತಿ ಎಕರೆಗೆ ಮಳೆಯಾಶ್ರಿತ ಹೆಸರು ಬೆಳೆಗೆ ₹ 269, ಉದ್ದು ಬೆಳೆಗೆ ₹ 265, ತೊಗರಿ ಬೆಳೆಗೆ ₹ 388, (₹ 406 ನೀರಾವರಿ), ಹತ್ತಿ ಬೆಳೆಗೆ ₹ 865, (₹ 1,492 ನೀರಾವರಿ ) ಹಾಗೂ ಸೂರ್ಯಕಾಂತಿಗೆ ₹ 331 ವಂತಿಕೆ ಪಾವತಿಸಬೇಕು ಎಂದಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪದಿಂದ ಬೆಳೆನಾಶವಾಗಬಹುದು. ಹೀಗಾಗಿ, ರೈತರು ಬಿತ್ತನೆಯ ಜತೆಗೆ ಬೆಳೆ ವಿಮೆ ಸಹ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.