ಕಲಬುರಗಿ: ‘ಸೈಬರ್ ಭದ್ರತೆ ಅತ್ಯಗತ್ಯ. ಬೌದ್ಧಿಕ ಆಸ್ತಿಯ ಸುರಕ್ಷತೆಗಾಗಿ ಪ್ರತಿಯೊಬ್ಬರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅನುಸರಿಸಬೇಕು’ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಭದ್ರತಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ತರಬೇತಿ ಕಾರ್ಯಕ್ರಮವು ಮಾಲ್‌ವೇರ್, ರಾನ್ಸಮ್‌ವೇರ್, ಫಿಶಿಂಗ್ ದಾಳಿಗಳು ಮತ್ತು ಡಿಜಿಟಲ್ ಸ್ವತ್ತುಗಳನ್ನು ಗುರಿಯಾಗಿಸುವ ಇತರ ದುರುದ್ದೇಶಪೂರಿತ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ’ ಎಂದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ‘ಸೈಬರ್ ಭದ್ರತೆ ನಿಖರವಾದ ಡೇಟಾವನ್ನು ಖಚಿತಪಡಿಸುತ್ತದೆ ಮತ್ತು ಯಾವುದೇ ವ್ಯಕ್ತಿಯ ಸೂಕ್ಷ್ಮ ಮಾಹಿತಿ ತಿರುಚುವುದನ್ನು ತಪ್ಪಿಸುತ್ತದೆ’ ಎಂದರು.
ಎನ್‌ಐಐಟಿ ಫೌಂಡೇಶನ್ ಪ್ರಾದೇಶಿಕ ವ್ಯವಸ್ಥಾಪಕ ನೀಲೇಶ್ ಖನ್ನಾ ಮಾತನಾಡಿ, ‘ಸೈಬರ್ ಭದ್ರತೆಯ ಸಹಾಯದಿಂದ ವೈಯಕ್ತಿಕ ಡೇಟಾವನ್ನು ರಕ್ಷಿಸಬಹುದು’ ಎಂದು ಹೇಳಿದರು.
ಪ್ರೊ.ಎ.ಎನ್. ವಿಜಯಕುಮಾರ್ ಹಾಜರಿದ್ದರು. ನೋಡಲ್ ಅಧಿಕಾರಿ ಪ್ರೊ.ಆರ್.ಎಸ್. ಹೆಗಾಡಿ ಸ್ವಾಗತಿಸಿದರು. ಐಕ್ಯೂಎಸಿ ನಿರ್ದೇಶಕ ಅಮರೇಂದ್ರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.