ADVERTISEMENT

ಏಕವ್ಯಕ್ತಿ ನಾಟಕಗಳ ಪ್ರದರ್ಶನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:26 IST
Last Updated 25 ಅಕ್ಟೋಬರ್ 2021, 4:26 IST
ಪ್ರಭಾಕರ ಜೋಶಿ
ಪ್ರಭಾಕರ ಜೋಶಿ   

ಕಲಬುರಗಿ: ಇಲ್ಲಿನ ರಂಗಾಯಣದಿಂದ ‘ಕನ್ನಡ ರಂಗ ರಾಜ್ಯೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯುಕ್ತ ಅಂಗವಾಗಿ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ ಪ್ರತಿದಿನ ಏಕವ್ಯಕ್ತಿ ನಾಟಕಗಳ ಪ್ರದರ್ಶನ ನಡೆಯಲಿದೆ.

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನ ಜರುಗಲಿದೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮತ್ತು ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ ತಿಳಿಸಿದ್ದಾರೆ.

ಅ.26ರಂದು ನಾಟಕ ಸಪ್ತಾಹವನ್ನು ಕನ್ನಡ ಚಲನಚಿತ್ರ ನಿರ್ಮಾಪಕಿ ಶ್ರುತಿ ಕುಲಕರ್ಣಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ್ ಆಗಮಿಸುವರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ಮೊದಲ ದಿನ ಮೈಸೂರಿನ ವನಿತಾ ರಾಜೇಶ ಅಭಿನಯದ ‘ಮಧುರ ಮಂಡೋದರಿ’ ನಾಟಕ ಪ್ರದರ್ಶನವಾಗಲಿದೆ.‌

ADVERTISEMENT

27ರಂದು ರಾಯಚೂರಿನ ಲಕ್ಷ್ಮಣ ಮಂಡಲಗೇರ ಅಭಿನಯದ ‘ನಕ್ಷತ್ರದ ಧೂಳು‌’ ನಾಟಕವಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನರಡ್ಡಿ ಪಾಟೀಲ ಆಗಮಿಸುವರು. 28ರಂದು ಕಲಬುರಗಿಯ ಶಾಂತಲಿಂಗಯ್ಯ ಮಠಪತಿ ಅಭಿನಯಿಸುವ ‘ಕೊನೆಯಿಲ್ಲದ ಪ್ರೀತಿ’ ನಾಟಕವಿದ್ದು, ಅತಿಥಿಯಾಗಿ ರಂಗಶಿಕ್ಷಕ ರಾಘವೇಂದ್ರ ಹಳಿಪೇಟೆ ಆಗಮಿಸುವರು.

29ರಂದು ಕಲಬುರಗಿಯ ಸಮೀರ ಸುಬೇದಾರ ಅಭಿನಯದ ‘ಅವ್ಯಕ್ತ’ ನಾಟಕ ಪ್ರದರ್ಶನವಿದೆ. ಅತಿಥಿಯಾಗಿ ಪತ್ರಕರ್ತ ಮಹೇಶ್ ಕುಲಕರ್ಣಿ ಆಗಮಿಸುವರು. 30ರಂದು ಬಳ್ಳಾರಿಯ ಕರಿಯಪ್ಪ ಕವಲೂರ ಅಭಿನಯದ ‘ಸ್ಮಶಾನ ವಾಸಿಯ ಸ್ವಗತ’ ನಾಟಕ ನಡೆಯಲಿದ್ದು, ಅತಿಥಿಯಾಗಿ ರಂಗ ಶಿಕ್ಷಕ ಅಶೋಕ ತೊಟ್ನಳ್ಳಿ ಆಗಮಿಸುವರು. 31ರಂದು ಬೆಂಗಳೂರಿನ ಗೋಕುಲ ಸಹೃದಯ ಅಭಿನಯಿಸುವ ‘ಚಿಟ್ಟೆ’ ನಾಟಕವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಅತಿಥಿಯಾಗುವರು.

ನವೆಂಬರ್ 1ರಂದು ಸಪ್ತಾಹ ಸಮಾರೋಪವಾಗಲಿದ್ದು ಮುಖ್ಯ ಅತಿಥಿಗಳಾಗಿ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮತ್ತು ನವರಂಗ ಟ್ರಸ್ಟ್ ಅಧ್ಯಕ್ಷ ಡಾ.ಉದಯಕುಮಾರ ಶಹಾ ಆಗಮಿಸುವರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗದ ಚಂದ್ರಶೇಖರ ಶಾಸ್ತ್ರಿ ಅಭಿನಯದ ಹೂವು ನಾಟಕ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.