ADVERTISEMENT

PHOTOS: ಚಿಂಚೋಳಿ ತಾಲ್ಲೂಕಿನಲ್ಲಿ ಕಂಪಿಸಿದ ಭೂಮಿ, ಬಿಕೋ ಎನ್ನುತ್ತಿರುವ ಗಡಿಕೇಶ್ವಾರ ಗ್ರಾಮ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮಂಗಳವಾರ ಮತ್ತೆ ಭೂಕಂಪನ ಸಂಭವಿಸಿದ್ದು, ಜನರು ಊರು ತೊರೆದಿದ್ದಾರೆ. ಮನೆಗಳಿಗೆ ಕೀಲಿ ಹಾಕಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. 10ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದು ಹಾನಿ ಸಂಭವಿಸಿದೆ. ಗ್ರಾಮದ ಬಾಣಂತಿಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಜೀವಭಯದಲ್ಲೇ ಬದುಕುವಂತಾಗಿದೆ. ಹಲವು ಮನೆಗಳಿಗೆ ಪರಸಿಗಳನ್ನೇ ಹೆಂಚುಗಳ ಮಾದರಿಯಲ್ಲಿ ಬಳಸಿದ್ದರಿಂದ ಈ ಗ್ರಾಮದಲ್ಲಿ ಭೂಕಂಪ ಉಂಟಾದಾಗ ಜನರಲ್ಲಿ ಹೆಚ್ಚು ಭಯ ಮೂಡುತ್ತದೆ. ಹಲವು ಜನ ಮಂಗಳವಾರ ಟ್ರ್ಯಾಕ್ಟರ್‌, ಬಸ್‌, ಲಾರಿಗಳಲ್ಲಿ ಹತ್ತಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು. -ಪ್ರಜಾವಾಣಿ ಚಿತ್ರಗಳು : ತಾಜುದ್ಧೀನ್ ಆಜಾದ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 5:59 IST
Last Updated 13 ಅಕ್ಟೋಬರ್ 2021, 5:59 IST
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್   
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಆತಂಕದಲ್ಲಿ ಕಣ್ಣೀರು ಹಾಕುತ್ತಿರುವ ಮಹಿಳೆ -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಜನರು –ಪ್ರಜಾವಾಣಿ ಚಿತ್ರಗಳು / ತಾಜುದ್ಧೀನ್ ಆಜಾದ್
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು
100 ವರ್ಷ ಹಳೆಯದಾದ ದೊಡ್ಡ ಮನೆಯೊಂದು ಖಾಲಿಯಾಗಿದ್ದು ಕಂಡುಬಂತು -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಗಡಿಕೇಶ್ವಾರ ಗ್ರಾಮದ ನೋಟ -ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಭೂಕಂಪನದ ಕಾರಣ ದೇವಸ್ಥಾನದ ಮುಖ್ಯದ್ವಾರ ಬಿರುಕುಬಿಟ್ಟಿದೆ. -ಪ್ರಜಾವಾಣಿ ಚಿತ್ರಗಳು/ ತಾಜುದ್ಧೀನ್ ಆಜಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.