ADVERTISEMENT

ಶಹಾಬಾದ್ | ಗಾಂಜಾ ವಶ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:50 IST
Last Updated 9 ಜೂನ್ 2025, 15:50 IST
ಶಹಾಬಾದ್ ನಗರದಲ್ಲಿ ಪೊಲೀಸರು ವಶಪಡಿಸಿಕೊಂಡ ಗಾಂಜಾ
ಶಹಾಬಾದ್ ನಗರದಲ್ಲಿ ಪೊಲೀಸರು ವಶಪಡಿಸಿಕೊಂಡ ಗಾಂಜಾ   

ಶಹಾಬಾದ್: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಷನ್‌ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ರೆಹಾನ್‌ ಪಾಶಾ ಮಹ್ಮದ ಪಾಶಾ ಪಟೇಲ್ ಎಂಬಾತನಿಂದ 140 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪಿಐ ನಟರಾಜ ಲಾಡೆ ತಿಳಿಸಿದ್ದಾರೆ.

ಈ ಕುರಿತು ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಐ ನಟರಾಜ ಲಾಡೆ, ಪಿಎಸ್ಐ ಚಂದ್ರಕಾಂತ ಮೆಕಾಲೆ, ಎಎಸ್ಐ ಮಲ್ಲಿಕಾರ್ಜುನ, ನಾಗೇಂದ್ರ ಎಚ್. ಸಿ., ಸಂತೋಷ, ಹುಸೇನ್ ಪಾಶಾ ಅವರನ್ನೊಳಗೊಂಡ ತಂಡ ಭಾಗವಹಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.