ಜೇವರ್ಗಿ (ಕಲಬುರಗಿ ಜಿಲ್ಲೆ): ಭಾರಿ ಮಳೆ–ಗಾಳಿಗೆ ತಾಲ್ಲೂಕಿನ ಮುದಬಾಳ (ಕೆ) ಗ್ರಾಮದ ಮನೆ ಮೇಲಿಂದ ಬಿದ್ದು ಗಾಯಗೊಂಡಿದ್ದ ಬಾಲಕಿಯೊಬ್ಬಳು ಶುಕ್ರವಾರ ಮೃತಪಟ್ಟಿದ್ದಾಳೆ.
ಏಪ್ರಿಲ್ 8ರಂದು ಸಂಜೆ ಬಿರುಗಾಳಿ ಬೀಸಲು ಪ್ರಾರಂಭಿಸಿದಾಗ ಪ್ರಿಯದರ್ಶಿನಿ ನಿಂಗಪ್ಪ ಹೊಸಮನಿ (11) ಎಂಬ ಬಾಲಕಿ ಮನೆಯ ಮಾಳಿಗೆಯ ಮೇಲಿದ್ದ ಬಟ್ಟೆ ತೆಗೆಯಲು ಬಾಲಕಿ ಹೋಗಿದ್ದಾಳೆ. ಮಳೆ–ಗಾಳಿಯ ಆರ್ಭಟ ಹೆಚ್ಚಾಗಿ ನಿಯಂತ್ರಣ ತಪ್ಪಿ ಮನೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಬಾಲಕಿ ತಂದೆ ನಿಂಗಪ್ಪ ಹೊಸಮನಿ ಅವರು ನೀಡಿದ ದೂರಿನನ್ವಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.