ವಾಡಿ: ‘ಕೃಷಿಕರಲ್ಲದವರು ರೈತರ ಜಮೀನು ಖರೀದಿ ಮಾಡಬಹುದು ಎಂದು ಸರ್ಕಾರ ಕಾನೂನಿಗೆ ತಿದ್ದುಪಡಿ ತಂದಿದ್ದು ಇದರ ಪರಿಣಾಮವಾಗಿ ಫಲವತ್ತಾದ ಕೃಷಿ ಭೂಮಿ ದೊಡ್ಡ ಬಂಡವಾಳಶಾಹಿಗಳ ತೆಕ್ಕೆಗೆ ಹೋಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ರೈತರು ಕೆಲವೇ ದಿನಗಳಲ್ಲಿ ಬೀದಿಪಾಲಾಗಲಿದ್ದಾರೆ’ ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ಗಣಪತರಾವ್.ಕೆ ಮಾನೆ ಕಳವಳ ವ್ಯಕ್ತಪಡಿಸಿದರು.
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಈಚೆಗೆ ಎಐಕೆಕೆಎಂಎಸ್ ರೈತ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ರೈತ ವಿರೋಧಿ ನೀತಿಗಳನ್ನು ತರುತ್ತಿದ್ದು ಇದರ ವಿರುದ್ಧ ರೈತರು ಸ್ವತಃ ಹೋರಾಟ ಬೆಳೆಸಬೇಕು’ ಎಂದು ಕರೆ ನೀಡಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವಾಡಿ ಕಾರ್ಯದರ್ಶಿ ಶರಣು ಹೇರೂರ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಿನಾಥ ಹುಂಡೇಕಲ, ಗೌತಮ್ ಪರತುರಕರ, ದತ್ತು ಹುಡೇಕರ, ಈರಣ್ಣ ಇಸಬಾ, ಶಿವಕುಮಾರ ಆಂದೋಲ ಹಾಗೂ ಇನ್ನಿತರರು ಇದ್ದರು.
ನೂತನ ಗ್ರಾಮ ಘಟಕ ರಚನೆ: ಭೀಮಪ್ಪ ಮಾಟನಳ್ಳಿ (ಅಧ್ಯಕ್ಷ), ಮಹಾಂತೇಶ ಹುಳಗೊಳ, ಚೌಡಪ್ಪ ಗಂಜಿ (ಉಪಾಧ್ಯಕ್ಷರು), ಸಾಬಣ್ಣ ಸುಣಗಾರ (ಕಾರ್ಯದರ್ಶಿ) ವಿರೇಶ ನಾಲವಾರ, ಸಾಬಣ್ಣ ಚಿತ್ತಾಪುರ, ವಿರೇಶ ಗುರೆಗೋಳ, ಶಶಿಕುಮಾರ ಇಸಬಾ, ಮಂಜು ಹಿಟ್ಟಿನ, ಮುನಿಂದ್ರ ಕೊಟಗಿ, ಚಂದ್ರಶೇಖರ ಕೋಟಗಿ, ಮುನೆಪ್ಪ ಹಿಟ್ಟಿನ, ರಮೇಶ ಪೂಜಾರಿ, ಗಿರೆಪ್ಪ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.