ಹೃದಯ
ಕಲಬುರಗಿ: ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂಬ ಸುದ್ದಿಯ ಬೆನ್ನಲ್ಲೇ, ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದಯ ಸಂಬಂಧಿತ ತಪಾಸಣೆಗಾಗಿ ಬರುವರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
‘ಮಾಧ್ಯಮಗಳಲ್ಲಿನ ಸುದ್ದಿ ನೋಡಿದ ಜನರು ಗ್ಯಾಸ್ಟ್ರಿಕ್‌ನಿಂದ ಎದೆಯುರಿಯಾದರೂ ಆತಂಕದಿಂದ ಆಸ್ಪತ್ರೆಗೆ ಬರುತ್ತಿದ್ದಾರೆ. ಎರಡು ವಾರಗಳ ಹಿಂದೆ ನಿತ್ಯದ ಒಪಿಡಿ ಸಂಖ್ಯೆ 400ರ ಆಸುಪಾಸಿನಲ್ಲಿತ್ತು. ಈಗ 650ರ ಗಡಿ ದಾಟಿದೆ’ ಎಂದು ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಪ್ರಭಾರ) ಡಾ.ವೀರೇಶ ಪಾಟೀಲ ಹೇಳಿದರು.
ಒಪಿಡಿ ಸಂಖ್ಯೆಯಲ್ಲಿ ಏರಿಕೆಯಾದಂತೆ ಹೃದಯ ಸಂಬಂಧಿತ ಇಸಿಜಿ, 2ಡಿ ಇಕೊ, ಟಿಎಂಟಿ, ಬಯೋ ಕೆಮಿಸ್ಟ್ರಿ, ಪ್ಯಾಥಾಲಜಿ ತಪಾಸಣೆಗೆ ಒಳಗಾಗುವರ ಸಂಖ್ಯೆಯೂ ಹೆಚ್ಚಾಗಿದೆ.
ಐದೂವರೆ ತಿಂಗಳಲ್ಲಿ 2,196 ಜನರು ಹೃದಯಾಘಾತಕ್ಕೆ ಒಳಗಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 104 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.