ಕಲಬುರಗಿ: ಇಲ್ಲಿನ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಬಂದಿರುವ ಅಭ್ಯರ್ಥಿಗಳು ಊಟಕ್ಕಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ.
ಅತ್ತ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರೆ, ಇತ್ತ ಹಸಿವು ತಣಿಸಿಕೊಳ್ಳಲು ಯುವಜನರು ಕಾದುನಿಂತಿದ್ದರು.
ಅಭ್ಯರ್ಥಿಗಳಿಗೆ ಉಣಬಡಿಸಲು ಗೋದಿ ಹುಗ್ಗಿ, ಮೊಸರನ್ನ, ವೆಜ್ ಪುಲಾವ್, ಸಾಂಬರ್ ಸಿದ್ಧವಾಗಿದೆ. ಅದನ್ನು ಉಣಬಡಿಸಲು ಸಿಬ್ಬಂದಿ ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾದು ನಿಂತಿದ್ದಾರೆ.
ವೇದಿಕೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾಷಣ ಮುಗಿಯುವ ತನಕ ಊಟ ವಿತರಣೆಗೆ ಮಾಡದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಆಹಾರ ವಿತರಣೆಗೆ ಸಜ್ಜಾಗಿರುವ ಸಿಬ್ಬಂದಿ ಪ್ರಜಾವಾಣಿಗೆ ತಿಳಿಸಿದರು.
'ಯಾವುದೇ ಕಾರಣಕ್ಕೂ ಊಟ ವಿತರಿಸಬೇಡಿ. ಸಾಧ್ಯವಾದರೆ ಪೊಲೀಸರ ನೆರವಿನೊಂದಿಗೆ ಯುವ ಜನರನ್ನು ಕಾರ್ಯಕ್ರಮದ ವೇದಿಕೆಯತ್ತ ಕಳುಹಿಸಿಕೊಡಿ' ಎಂದು ಹಿರಿಯ ಅಧಿಕಾರಿಗಳು ವಾಟ್ಸ್ ಆ್ಯಪ್ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಧ್ಯ ಪ್ರವೇಶದ ಬಳಿಕ ಮಧ್ಯಾಹ್ನ 2.32ಕ್ಕೆ ಊಟ ವಿತರಣೆ ಶುರುವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.