ADVERTISEMENT

ಮಾದನ ಹಿಪ್ಪರಗಿ: ಕಾಲೇಜು ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 10:16 IST
Last Updated 4 ಆಗಸ್ಟ್ 2022, 10:16 IST
ತರಗತಿಯ ಮೇಲ್ಛಾವಣಿ ಕುಸಿದಿದ್ದರಿಂದ ಗಾಯಗೊಂಡ ವಿದ್ಯಾರ್ಥಿನಿ ನಿಕಿತಾ
ತರಗತಿಯ ಮೇಲ್ಛಾವಣಿ ಕುಸಿದಿದ್ದರಿಂದ ಗಾಯಗೊಂಡ ವಿದ್ಯಾರ್ಥಿನಿ ನಿಕಿತಾ   

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಕೋಣೆ ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಝಳಕಿ ಗ್ರಾಮದ ವಿದ್ಯಾರ್ಥಿನಿ ನಿಕೀತಾ ಬಾಬುರಾವ ನಿಂಗದಳ್ಳಿ ಗಾಯಗೊಂಡು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾಳೆ. ಪ್ರಥಮ ಪಿಯು ತರಗತಿ ಬೋಧನೆ ವೇಳೆಯಲ್ಲಿ ಏಕಾಏಕಿ ಮೇಲ್ಛಾವಣಿ ಕುಸಿದಿದೆ. ನಿಕಿತಾ ಸೇರಿದಂತೆ ಇನ್ನೂ ಇಬ್ಬರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯವಾಗಿವೆ. ಕರ್ನಾಟಕ ಪಬ್ಲಿಕ್ ಶಾಲೆ, ಪಿಯು ಕಾಲೇಜು ಕಟ್ಟಡದಲ್ಲಿ ನಡೆಯುವುದರಿಂದ ಹೊಸ ಕಟ್ಟಡದ ಮೇಲ್ಛಾವಣಿಯು ಸತತ ಮಳೆಯಿಂದಾಗಿ ತುಂಬಿ ನಿಂತಿದೆ.

ಅಲ್ಲದೇ ಕಾಮಗಾರಿಯು ಕಳಪೆಯಾಗಿದೆ. ಇಂತಹ ಕಳಪೆ ಕಟ್ಟಡದಲ್ಲಿ ತರಗತಿ ನಡೆಸುತ್ತಿರುವುದಕ್ಕೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.