ADVERTISEMENT

ಸೆ 28ರಿಂದ ಗಣರಾಜ್ಯೋತ್ಸವ ಪೂರ್ವ ತರಬೇತಿ

14 ಜನ ಎನ್‌ಎಸ್‌ಎಸ್‌ ಸ್ವಯಂಸೇವಕರನ್ನು ಆಯ್ಕೆ ಮಾಡಿದ ಗುಲಬರ್ಗಾ ವಿ.ವಿ.

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:40 IST
Last Updated 21 ಸೆಪ್ಟೆಂಬರ್ 2021, 4:40 IST
ಬೆಳಗಾವಿಯಲ್ಲಿ ನಡೆಯಲಿರುವ ಗಣರಾಜ್ಯಪೂರ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾದ ಎನ್‌ಎಸ್‌ಎಸ್‌ ಸ್ವಯಂ ಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿಗಳು ಇದ್ದರು
ಬೆಳಗಾವಿಯಲ್ಲಿ ನಡೆಯಲಿರುವ ಗಣರಾಜ್ಯಪೂರ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾದ ಎನ್‌ಎಸ್‌ಎಸ್‌ ಸ್ವಯಂ ಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿಗಳು ಇದ್ದರು   

ಕಲಬುರ್ಗಿ: ಇದೇ 28–29, 30 ಹಾಗೂ ಅಕ್ಟೋಬರ್ 1ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೂರ್ವ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್‌)ಯ ವಿಶೇಷ ತರಬೇತಿಗೆ ಗುಲಬರ್ಗಾ ವಿ.ವಿ.ಯ ಎನ್‌ಎಸ್‌ಎಸ್‌ ಕೋಶವು 14 ಸ್ವಯಂ ಸೇವಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.

ಬೀದರ್ ಜಿಲ್ಲೆ ಬಸವ ಕಲ್ಯಾಣದ ಎಸ್‌ಎಸ್‌ಕೆಬಿ ಕಾಲೇಜಿನ ಕರಣ ಬಿರಾದಾರ, ಬೀದರ್‌ನ ಕರ್ನಾಟಕ ಪದವಿ ಕಾಲೇಜಿನ ಮಾರುತಿ ಶಿವಪುತ್ರ, ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿನ ಸಾಗರ್, ಯಾದಗಿರಿ ಜಿಲ್ಲೆ ಕೆಂಭಾವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿದ್ದಣ್ಣ ಎನ್., ಕಲಬುರ್ಗಿಯ ಎನ್‌.ವಿ. ಕಾಲೇಜಿನ ಶಿವಪುತ್ರ ಪಾಟೀಲ, ರಾಯಚೂರಿನ ಎಸ್‌ಎಸ್‌ಎಂ ಪದವಿ ಕಾಲೇಜಿನ ದೇವಪ್ಪ ಹಾಗೂ ಕಲಬುರ್ಗಿಯ ಎಸ್‌.ಬಿ. ಕಲಾ ಕಾಲೇಜಿನ ಸಮರ್ಥ ಎಸ್‌.ಎಚ್. ಆಯ್ಕೆಯಾಗಿದ್ದಾರೆ.

ಮಹಿಳಾ ಸ್ವಯಂ ಸೇವಕರಲ್ಲಿ ಕಲಬುರ್ಗಿಯ ಗುರುಕುಲ ಕಾಲೇಜಿನ ಸೌಮ್ಯ ಸಿದ್ಧಾರೂಢ, ಎಸ್‌.ಬಿ. ಕಲಾ ಕಾಲೇಜಿನ ಸಂಗೀತಾ ಎ., ರಾಯಚೂರಿನ ಎಸ್‌ಎಸ್‌ಎಂ ಪದವಿ ಕಾಲೇಜಿನ ಜಿ.ಹರಿತಾ, ಚಿಂಚೋಳಿಯ ಸಿ.ಬಿ. ಪಾಟೀಲ ಪದವಿ ಕಾಲೇಜಿನ ಪೂಜಾ ಜಗನ್ನಾಥ, ಬಸವ ಕಲ್ಯಾಣದ ಎಸ್‌ಎಸ್‌ಕೆಬಿ ಕಾಲೇಜಿನ ಭಾಗ್ಯಶ್ರೀ ಎಸ್‌., ಕಲಬುರ್ಗಿಯ ಎಂಎಂಕೆ ದೃಶ್ಯಕಲಾ ಕಾಲೇಜಿನ ಜಯಾ ಸಿಂಗ್ ಹಾಗೂ ಬೀದರ್‌ನ ಕರ್ನಾಟಕ ಪದವಿ ಕಾಲೇಜಿನ ರೋಹಿಣಿ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗುಲಬರ್ಗಾ ವಿ.ವಿ. ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಪ್ರೊ. ರಮೇಶ ಲಂಡನರ್ ತಿಳಿಸಿದ್ದಾರೆ.

ADVERTISEMENT

ಸೆ 28, 29ರಂದು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಶಿಬಿರ ಇರಲಿದ್ದು, ಸೆ 29, ಅ 1ರಂದು ವಿದ್ಯಾರ್ಥಿನಿಯರಿಗೆ ಶಿಬಿರ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.