ಸಾವು
(ಪ್ರಾತಿನಿಧಿಕ ಚಿತ್ರ)
ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಇಮಡಾಪುರ ಗ್ರಾಮದ ನಾಟಿ ವೈದ್ಯನಿಂದ ಔಷಧ ಪಡೆದಿದ್ದ ಇನ್ನೊಬ್ಬ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಭೀಮನಳ್ಳಿ ತಾಂಡಾ ನಿವಾಸಿ ಮನೋಹರ್ ರಾಠೋಡ (35) ಮೃತ ವ್ಯಕ್ತಿ.
ಮದ್ಯ ಸೇವನೆಯ ವ್ಯಸನದಿಂದ ಮುಕ್ತರಾಗಲು ಮನೋಹರ್ ಬುಧವಾರ ನಾಟಿ ವೈದ್ಯನಿಂದ ಔಷಧ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಟಿ ಔಷಧ ಪಡೆದಿದ್ದ ಮೂವರು ಬುಧವಾರ ಮೃತಪಟ್ಟಿದ್ದರು. ಮನೋಹರ್ ಅವರೂ ಅಸುನೀಗಿರುವುದರೊಂದಿಗೆ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.
ಇಮಡಾಪುರ ಗ್ರಾಮದ ನಾಟಿ ವೈದ್ಯ ಫಕೀರಪ್ಪ ಅಲಿಯಾಸ್ ಸಾಯಪ್ಪ ಎಂಬುವವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.