ಚಿಂಚೋಳಿ: ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಬಾಳೆ ಗಿಡಗಳು ನೆಲಕ್ಕುಳಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಬಾಳೆ ಬೆಳೆಗಾರ ರವಿಕುಮಾರ ಜೊನ್ನಲ, ರಾಘವೇಂದ್ರರಡ್ಡಿ, ಶಿವಕುಮಾರ ಕಾಂಟಲಿ ಅವರ ತೋಟಗಳಲ್ಲಿ ಬೆಳೆದ ಬಾಳೆ ಗಿಡುಗಳು ಧರೆಗುರುಳಿವೆ ಎಂದು ಬೆಳೆಗಾರ ರವಿಕುಮಾರ ಜೊನ್ನಲ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರವಿಕುಮಾರ ಅವರು 3 ಎಕರೆ ಹಾಗೂ ಶಿವಕುಮಾರ 3 ಎಕರೆ ಮತ್ತು ರಾಘವೇಂದ್ರರಡ್ಡಿ 4 ಎಕರೆ ಬಾಳೆ ಬೇಸಾಯ ಮಾಡುತ್ತಿದ್ದಾರೆ. ಗೊನೆಬಿಟ್ಟು ಕಾಯಿ ಬಲಿಯುವ ಹಂತದಲ್ಲಿ ಮಳೆ ಗಾಳಿಗೆ ಸಿಲುಕಿ ಗಿಡಗಳು ನೆಲಕ್ಕುರುಳಿವೆ. ಒಬ್ಬೊಬ್ಬ ರೈತರ ಹೊಲದಲ್ಲಿ 300ರಿಂದ 500 ಗಿಡಗಳು ಧರೆಗುರುಳಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.