ADVERTISEMENT

ಕಲಬುರಗಿ: ಪಡಿತರ ಅಕ್ಕಿ, ಗೋಧಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:28 IST
Last Updated 24 ಅಕ್ಟೋಬರ್ 2021, 3:28 IST

ಕಲಬುರಗಿ: ನಗರದ ಹೊರವಲಯದ ತಾಜ್ ನಗರ ಬಡಾವಣೆಯ ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 47.85 ಕ್ವಿಂಟಲ್ ಅಕ್ಕಿ ಚೀಲ ಮತ್ತು 24 ಕ್ವಿಂಟಲ್ ಗೋಧಿ ಚೀಲಗಳನ್ನು ಚೌಕ ಠಾಣೆ ಪೊಲೀಸರು ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ.

‘ಆಸಿಯಾ ಬೇಗಂ ಎಂಬುವರಿಗೆ ಸೇರಿದ ಕಟ್ಟಡದಲ್ಲಿ 1.19 ಲಕ್ಷ ಮೌಲ್ಯದ ಅಕ್ಕಿ ಹಾಗೂ ₹ 30 ಸಾವಿರ ಮೌಲ್ಯದ ಗೋಧಿ ವಶಪಡಿಸಿಕೊಳ್ಳಲಾಗಿದೆ. ಚೌಕ ಠಾಣೆ ಪಿಎಸ್‌ಐ ಬಸವರಾಜ ಮಂಜಾಳಕರ ಹಾಗೂ ಆಹಾರ ನಿರೀಕ್ಷಕ ಅಮರೇಶ ಕಾರ್ಯಾಚರಣೆ ನಡೆಸಿದರು. ಕಟ್ಟಡದ ಮಾಲೀಕರಾದ ಆಸಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT