ADVERTISEMENT

ರಸ್ತೆ ಸುರಕ್ಷತೆ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 12:24 IST
Last Updated 17 ಫೆಬ್ರುವರಿ 2021, 12:24 IST
ಕಲಬುರ್ಗಿಯ ಸರ್ವಜ್ಞ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ. ಈರಣ್ಣ
ಕಲಬುರ್ಗಿಯ ಸರ್ವಜ್ಞ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ. ಈರಣ್ಣ   

ಕಲಬುರ್ಗಿ: ನಗರದ ಸರ್ವಜ್ಞ ಪಿ.ಯು. ಕಾಲೇಜಿನಲ್ಲಿ ಇತ್ತೀಚೆಗೆ ಸಾರಿಗೆ ಇಲಾಖೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ. ಈರಣ್ಣ ಅವರು ವಿದ್ಯಾರ್ಥಿಗಳಿಗೆ ಸಂಚಾರಿ ಚಿಹ್ನೆಗಳು, ಅಪಘಾತಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಕಚೇರಿ ಅಧೀಕ್ಷಕ ಭೀಮರಾಯ, ಕಚೇರಿ ಸಿಬ್ಬಂದಿ ರತನಕುಮಾರ್ ಸಂಕನಕರ್, ಕಾಲೇಜಿನ ಆಡಳಿತ ಮಂಡಳಿಯ ಚೆನ್ನಾರೆಡ್ಡಿ ಪಾಟೀಲ, ಉಪನ್ಯಾಸಕರಾದ ಕರುಣೇಶ ಹಿರೇಮಠ, ವಿದ್ಯಾವತಿ ಪಾಟೀಲ, ಅಶೋಕ ಕಾಬಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.