ADVERTISEMENT

ಡಾ. ರಮೇಶ ಯಳಸಂಗಿಕರ್ ಗೆ ರೋಟರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 8:20 IST
Last Updated 12 ಅಕ್ಟೋಬರ್ 2021, 8:20 IST
ಕಲಬುರಗಿಯ ಡಾ. ರಮೇಶ ಯಳಸಂಗಿಕರ್ ಅವರಿಗೆ ಆಂಧ್ರಪ್ರದೇಶದ ನಂದ್ಯಾಳದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ಮಹೇಶ ಕೊಟಬಾಗಿ ಪ್ರಾದೇಶಿಕ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು. ನಿಕಟಪೂರ್ವ ಗರ್ವನರ್ ಚಿನ್ನಪ್ಪರೆಡ್ಡಿ, ಮಹಾಲಕ್ಷ್ಮಿ ಚಿನ್ನಪ್ಪ ಇದ್ದರು

ಕಲಬುರಗಿ: ಪೋಲಿಯೊ ನಿರ್ಮೂಲನೆಗೆ ನೀಡಿದ ಕೊಡುಗೆಗಾಗಿ ಇಲ್ಲಿಯ ಮಕ್ಕಳ ತಜ್ಞ ಡಾ. ರಮೇಶ ಯಳಸಂಗಿಕರ್ ಅವರಿಗೆ ಅಂತರರಾಷ್ಟ್ರೀಯ ರೋಟರಿ ಫೌಂಡೇಷನ್‌ನ 2020ನೇ ಸಾಲಿನ ಪ್ರಾದೇಶಿಕ ಸೇವಾ ಪ್ರಶಸ್ತಿ ಲಭಿಸಿದೆ.

ಆಂಧ್ರಪ್ರದೇಶದ ನಂದ್ಯಾಳದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ಮಹೇಶ ಕೊಟಬಾಗಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ರಮೇಶ ಯಳಸಂಗಿಕರ್ ಅವರು ಪ್ರಾದೇಶಿಕ ಸೇವಾ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಏಷ್ಯಾದ ಏಳು ಜನ ರೋಟೆರಿಯನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ನಿಕಟಪೂರ್ವ ಗರ್ವನರ್ ಚಿನ್ನಪ್ಪ ರೆಡ್ಡಿ, ಮಹಾಲಕ್ಷ್ಮಿ ಚಿನ್ನಪ್ಪ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT