ಕಲಬುರ್ಗಿ: ಪ್ರಯಾಣಿಕರ ಕೋರಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿವಿಧ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ದರದಲ್ಲಿ ನೂತನವಾಗಿ ‘ನಾನ್ ಎ.ಸಿ ಸ್ಲೀಪರ್’ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.
ಯಾದಗಿರಿಯಿಂದ ಬೆಂಗಳೂರಿಗೆ ಸಂಜೆ 7 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 850 ಇರುತ್ತದೆ. ಶಕ್ತಿನಗರದಿಂದ ಬೆಂಗಳೂರಿಗೆ ರಾತ್ರಿ 8.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 775 ಇದೆ. ರಾಯಚೂರದಿಂದ ಬೆಂಗಳೂರಿಗೆ ರಾತ್ರಿ 9.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 750 ಮಾಡಲಾಗಿದೆ.
ಮಂತ್ರಾಲಯದಿಂದ ಬೆಂಗಳೂರಿಗೆ ರಾತ್ರಿ 10.45 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 680 ಹಾಗೂ ಬೆಂಗಳೂರಿನಿಂದ ರಾಯಚೂರಿಗೆ ರಾತ್ರಿ 7.45 ಗಂಟೆಗೆ ಹೊರಡಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.