ಕಲಬುರಗಿ: ನಗರದ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ವಿಶೇಷ ಜಾಗೃತಿ ಮತ್ತು ಉಚಿತ ರಕ್ತದೊತ್ತಡ ತಪಾಸಣೆ ಶಿಬಿರ ನಡೆಯಿತು.
ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುರೇಶ ಹರಸೂರ ಮಾತನಾಡಿ, ‘ಅಧಿಕ ರಕ್ತದೊತ್ತಡದಿಂದ ತೊಂದರೆಗಳು ಎದುರಾಗುತ್ತವೆ. ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪರೀಕ್ಷೆಗೊಳಪಡುವ ಮೂಲಕ ಅದನ್ನು ಬೇಗ ಪತ್ತೆಹಚ್ಚಿ ಸಂಭಾವ್ಯ ಅಪಾಯ ತಪ್ಪಿಸಬಹುದು’ ಎಂದರು.
ಸಹ ಪ್ರಾಧ್ಯಾಪಕ ಡಾ.ಸಿ.ಬಿ.ನಂದ್ಯಾಳ ಭಾಗವಹಿಸಿದ್ದರು. ಹಲವರು ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.