ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರೋಹಿತ್ ಮಣ್ಣಅಂಕಲಗಿ (15) ಶನಿವಾರ ಮಧ್ಯಾಹ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೋಹಿತ್ ಅದೇ ಶಾಲೆಯ ಮುಖ್ಯಅಡುಗೆ ಸಹಾಯಕಿ ದಮಯಂತಿ ಮೊಮ್ಮಗ. ಕಳೆದ ಎಂಟು ವರ್ಷದಿಂದ ಅಜ್ಜಿಯ ಮನೆಯಲ್ಲೇ ನೆಲೆಸಿದ್ದ. ಈ ಸಂಬಂಧ ಅಫಜಲಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಬೈದಿದ್ದಕ್ಕೆ ಆತ್ಮಹತ್ಯೆ?: ‘ವಿದ್ಯಾರ್ಥಿ ರೋಹಿತ್ ಗುಟ್ಕಾ ತಿನ್ನುತ್ತಿದ್ದ. ಈ ವಿಷಯ ತಿಳಿದ ಅಜ್ಜಿ ಬೈದಿದ್ದರು. ಅದನ್ನೆ ನೆಪವಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.