ಕಲಬುರಗಿ: ತೀವ್ರ ರಕ್ತ ಹೀನತೆ (ಥ್ರಂಬೋಸೈಟೋಪೆನಿಯಾ) ಹಾಗೂ ಅಧಿಕ ರಕ್ತದೊತ್ತಡ (ಪ್ರಿಕ್ಲಾಂಪ್ಸಿಯಾ)ದಿಂದ ಬಳಲುತ್ತಿದ್ದ ಗರ್ಭಿಣಿಗೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸುವಲ್ಲಿ ನಗರದ ಉಸ್ತಾದ್ ಕಿಡ್ನಿ ಕೇರ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಸೈದಾ ಸುಬಿಯಾ ತನ್ವೀರ್ ಉಸ್ತಾದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಡಾ. ಇರ್ಫಾನ್ ವಾರಿಸ್, ಡಾ. ಅಬ್ದುಲ್ ರಜಾಕ್, ಡಾ. ಸಂತೋಷ ಕುಬಾ ಹಾಗೂ ಡಾ. ಸಂದೀಪ್ ಅವರು ತಂಡದಲ್ಲಿದ್ದರು.
ತೀವ್ರ ರಕ್ತ ಹೀನತೆ ಹಾಗೂ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಅರಿವಳಿಕೆ ಮದ್ದು ನೀಡುವುದು ಸವಾಲಿನ ಕೆಲಸ. ಆದರೂ ತಜ್ಞರ ಮಾರ್ಗದರ್ಶನದಲ್ಲಿ ಕಡಿಮೆ ಪ್ರಮಾಣದಲ್ಲಿ ನಿದ್ರೆಗೆ ಜಾರುವ (ಸೆಡೇಷನ್) ಔಷಧ, ಅರಿವಳಿಕೆ ಮದ್ದು ನೀಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.