ಕಲಬುರಗಿ: ‘ಜೀವನದಲ್ಲಿ ಮುಂದೆ ಸಾಗಲು ನಮಗೆ ಪುಸ್ತಕಗಳು ಸಹಕಾರಿ. ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸಾಹಿತ್ಯ ಅಕಾಡಮಿ ಸದಸ್ಯೆ ಚಂದ್ರಕಲಾ ಬಿದರಿ ಸಲಹೆ ನೀಡಿದರು.
ಎಚ್‌ಕೆಇ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಹಮ್ಮಿಕೊಂಡ ಕನ್ನಡ ವ್ಯಾಕರಣ ಹೆಚ್ಚುವರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾನು ನನ್ನ ಜೀವನದಲ್ಲಿ ಕೇವಲ ಹೆಸರಿಗಾಗಿ ಕೆಲಸ ಮಾಡದೆ, ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿರುವೆ. ಕೆಲಸದ ಬಗೆಗೆ ನನಗೆ ಇರುವ ಶ್ರದ್ಧೆ ಮತ್ತು ಪರಿಶ್ರಮದಿಂದ ಈ ನಾಡು ನನ್ನನ್ನು ಗುರುತಿಸುವಂತೆ ಮಾಡಿದೆ’ ಎಂದರು.
ಪ್ರಾಚಾರ್ಯ ಆರ್.ಬಿ.ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ಅಶೋಕ ಸ್ವಾಗತಿಸಿದರು. ಬಸಮ್ಮ ಗೊಬ್ಬರ ನಿರೂಪಿಸಿದರು. ದಾನಮ್ಮ, ಶಿವಲೀಲಾ ಧೋತ್ರೆ, ಶ್ರೀದೇವಿ ಸರಡಗಿ, ನಾಗರತ್ನ, ಗೀತಾ ಪಾಟೀಲ, ವಿವಿಧ ವಿಭಾಗಗಳ ಉಪನ್ಯಾಸಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.