ADVERTISEMENT

ಕ್ಲೌಡ್ ಕಂಪ್ಯೂಟಿಂಗ್‌ನಿಂದ ವೆಚ್ಚ ಉಳಿತಾಯ: ಶಿವಾನಂದ ಪೂಜಾರ

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 3:15 IST
Last Updated 24 ಮಾರ್ಚ್ 2021, 3:15 IST
ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾರ್ಯಾಗಾರಕ್ಕೆ ಪ್ರಾಚಾರ್ಯ ಡಾ.ಎಸ್‌.ಎಸ್‌. ಹೆಬ್ಬಾಳ ಚಾಲನೆ ನೀಡಿದರು. ಶಿವಾನಂದ ಪೂಜಾರ, ಡಾ.ಶಶಿಧರ ಕಲಶೆಟ್ಟಿ, ಪ್ರೊ. ಸುವರ್ಣಾ ನಂದ್ಯಾಳ, ಪ್ರೊ. ಶ್ರೀದೇವಿ ಸೋಮಾ ಇದ್ದರು
ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾರ್ಯಾಗಾರಕ್ಕೆ ಪ್ರಾಚಾರ್ಯ ಡಾ.ಎಸ್‌.ಎಸ್‌. ಹೆಬ್ಬಾಳ ಚಾಲನೆ ನೀಡಿದರು. ಶಿವಾನಂದ ಪೂಜಾರ, ಡಾ.ಶಶಿಧರ ಕಲಶೆಟ್ಟಿ, ಪ್ರೊ. ಸುವರ್ಣಾ ನಂದ್ಯಾಳ, ಪ್ರೊ. ಶ್ರೀದೇವಿ ಸೋಮಾ ಇದ್ದರು   

ಕಲಬುರ್ಗಿ: ಕ್ಲೌಡ್‍ ಕಂಪ್ಯೂಟಿಂಗ್ ಪರಿಣತಿ ಪಡೆದವರಿಗಿಂದು ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ ಮತ್ತು ಈಗ ಬಹುತೇಕ ವಾಣಿಜ್ಯ ವ್ಯವಹಾರಗಳು ಕ್ಲೌಡ್‍ಕಂಪ್ಯೂಟಿಂಗ್ ಮೂಲಕವೇ ನಡೆಯುತ್ತಿದೆ. ಇದರ ಬಳಕೆಯಿಂದ ಕಂಪನಿಗಳಿಗೆ ಗಣಕೀಕರಣದ ವೆಚ್ಚ ಉಳಿತಾಯವಾಗುತ್ತದೆ ಎಂದು ಆಸ್ಟ್ರೇಲಿಯಾದ ಮಾಂಜ್ರಾ ಸಾಫ್ಟ್‌ ಕಂಪನಿಯ ಕನ್ಸಲ್ಟಂಟ್ ಶಿವಾನಂದ ಪೂಜಾರ ಹೇಳಿದರು.

ಇಲ್ಲಿನ ಪಿಡಿಎ ಎಂಜಿನಿಯರಿಂಗ್‍ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ‘ಫಂಡಮೆಂಟಲ್ಸ್ ಆಫ್‍ ಓಪನ್ ಸ್ಟ್ಯಾಕ್ ಮತ್ತು ಕಂಟೆನರ್‌ ಕ್ಲೌಡ್ ತಂತ್ರಾಂಶ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಹೆಬ್ಬಾಳ, ‘ಈ ಕ್ಲೌಡ್‍ ಕಂಪ್ಯೂಟಿಂಗ್ ಪ್ರಯೋಗಶಾಲೆ ಒಂದು ಮಾದರಿಯಾಗಿದ್ದು, ಇದರ ಸದುಪಯೋಗವನ್ನು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಒಟ್ಟು 60 ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ವಿಭಾಗದ ಮುಖ್ಯಸ್ಥೆ ಡಾ.ಸುವರ್ಣ ನಂದ್ಯಾಳ ಸ್ವಾಗತಿಸಿದರು. ತರಬೇತಿಯ ಸಂಯೋಜಕಿ ಡಾ.ಶ್ರೀದೇವಿ ಸೋಮಾ ಅತಿಥಿಗಳ ಪರಿಚಯ ಮಾಡಿ ತರಬೇತಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಉಪ ಪ್ರಾಚಾರ್ಯ ಡಾ.ಶಶಿಧರ ಕಲಶೆಟ್ಟಿ, ಡೀನ್‍ ಡಾ. ಸಿದ್ದರಾಮ ಪಾಟೀಲ, ಪರೀಕ್ಷೆ ನಿಯಂತ್ರಕ ಪ್ರೊ. ರವೀಂದ್ರ ಲಠ್ಠ, ಟೆಕ್ಯೂಪ್ ಸಂಚಾಲಕ ಪ್ರೊ. ಶರಣ ಪಟಶೆಟ್ಟಿ, ವಿಭಾಗದ ಮುಖ್ಯಸ್ಥ ಡಾ. ಎಸ್.ಜಿ. ಪಾಟೀಲ, ಡಾ.ಭಾರತಿ ಹರಸೂರ, ಡಾ.ರೇಖಾ ಪಾಟೀಲ, ಡಾ.ಸುಜಾತಾ ತೇರದಾಳ, ಡಾ.ಜಯಶ್ರೀ ಅಗರಖೇಡ, ಡಾ.ಪ್ರಕಾಶ ಪಟ್ಟಣ, ಜ್ಯೋತಿ ಪಾಟೀಲ್, ಡಾ. ಅನಿತಾ ಹರಸೂರ, ಡಾ.ಅನುರಾಧಾ ಟಿ, ಅಮರೇಶ್ವರಿ, ರೇಖಾ ಎಸ್. ಪಾಟೀಲ, ಜಯಂತಿ ಕೆ, ಚೇತನ್ ಉಪಸ್ಥಿತರಿದ್ದರು.

ಸಂಯೋಜಕಿ ಡಾ.ಶೈಲಜಾ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಹತ್ತರಕಿ ಪ್ರಾರ್ಥಿಸಿದರು. ರುಕ್ಮಿಣಿ ಸತ್ಯನಾರಾಯಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.