ADVERTISEMENT

ಕವಿತೆ ಸಮಕಾಲೀನ ಸಮಸ್ಯೆ ಸ್ಫುರಿಸಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:25 IST
Last Updated 4 ಅಕ್ಟೋಬರ್ 2011, 5:25 IST

ಗೋಣಿಕೊಪ್ಪಲು: ಕವಿಗಳು ಸಮ ಕಾಲಿನ ಸಮಸ್ಯೆಗಳನ್ನು ಬರವಣಿಗೆಯಲ್ಲಿ  ಮೂಲಕ ಗಮನ ಸೆಳೆದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹೇಳಿದರು.

ಇಲ್ಲಿನ ಕಾವೇರಿ ದಸರಾ ಸಮಿತಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ನಡೆದ ದಸರಾ ಕವಿಗೋಷ್ಠಿ ಉದ್ಘಾಟಿಸಿ  ಅವರು ಮಾತನಾಡಿದದರು.

 ಕೊಡಗಿನ ಸಂಸ್ಕೃತಿ ಇಲ್ಲಿನ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಅಂತಹ ಸಂಸ್ಕೃತಿಯ ನೆಲೆಬೀಡು ಜಮ್ಮಾ ಭೂಮಿ ಬಗ್ಗೆ ಈಗ ಆತಂಕ ಶುರು ವಾಗಿದೆ. ಜಮ್ಮಾ ಇಲ್ಲದೆ ಕೊಡಗಿನ ಜನರಿಲ್ಲ. ಜತೆಗೆ ಸಂಸ್ಕೃತಿಯೂ ಕೂಡ ಇಲ್ಲ. ಜಮ್ಮಾ ಬಗ್ಗೆ ತಾವೇ ರಚಿಸಿದ ಕವಿತೆಯನ್ನು ಅವರು ಓದಿದರು.

`ಕವನ ಸಿಂಚನ~ ಕವಿತಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಕೊಡಗಿನಲ್ಲಿ ಕವಿ ಗಳು ಹೆಚ್ಚಿನ ಪ್ರಮಾಣದಲ್ಲಿ  ಕಂಡು ಬರುತ್ತಿಲ್ಲ. ಇದಕ್ಕೆ ಕಾರಣ ಹಿಂದಿನ ಸಾಹಿತಿಗಳು ತಮ್ಮ ಮಕ್ಕಳಿಗೆ ಸಾಹಿತ್ಯದ  ಒಲವು ಮೂಡಿಸದೆ ಇರುವುದು ಎಂದರು.

ಮೈಸೂರು ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ಎಂಜಿಆರ್ ಅರಸ್ ಮಾತನಾಡಿ, ಚುಟುಕು  ಸಾಹಿತ್ಯದಿಂದ ಜನರಲ್ಲಿ ಸೌಹಾರ್ದ ಮೂಡುತ್ತದೆ. ಮಾನ ವೀಯ ಅಂತಃಕರಣವನ್ನು ಸಂದೇಶದ ಮೂಲಕ ಸಾರಲು ಚುಟುಕು ಸಾಹಿತ್ಯ ಸಹಕಾರಿಯಾಗುತ್ತದೆ. ಉತ್ತಮ ಚುಟುಕು ಸಾಹಿತ್ಯದ ಮೂಲಕ ಸಮಾಜ ದಲ್ಲಿ ಪ್ರೀತಿ ವಿಶ್ವಾಸ ಬಲಗೊಳಿಸ ಬಹುದು ಎಂದರು.

ಕಾರ್ಯಕ್ರಮಕ್ಕೆ ತಡವಾಗಿ ಆಗ ಮಿಸಿದ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ರಾಜಕಾರಣಿ ಗಳಿಗೆ ಬಹಳಷ್ಟು  ಕಾರ್ಯಕ್ರಮ ಗಳಿರುತ್ತವೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಕರೆಯಬೇಡಿ ಎಂದರು.

ಮೈಸೂರು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪ ಗೌಡ, ದಸರಾ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮ್ಲ್ಲುಲೇಂಗಡ ಮಧೋಶ್ ಪೂವಯ್ಯ ಹಾಜರಿದ್ದರು. ರೇವತಿ ಪೂವಯ್ಯ ಪ್ರಾರ್ಥಿಸಿದರು. ಚಮ್ಮಟೀರ ಪ್ರವೀಣ್ ಉತ್ತಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.