ADVERTISEMENT

ಕಾಲ್ನಡಿಗೆ ಮೂಲಕ ಬಿಜೆಪಿ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:27 IST
Last Updated 8 ಮೇ 2018, 13:27 IST
ಸುಂಟಿಕೊಪ್ಪ ಭಾನುವಾರ ನಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮತಯಾಚಿಸಿದರು
ಸುಂಟಿಕೊಪ್ಪ ಭಾನುವಾರ ನಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮತಯಾಚಿಸಿದರು   

ಸುಂಟಿಕೊಪ್ಪ: ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕಾಲ್ನಡಿಗೆಯ ಮೂಲಕ ರೋಡ್ ಷೋ ನಡೆಸಿ ಭಾನುವಾರ ಮತಯಾಚಿಸಿದರು.
ಸಮೀಪದ ಗದ್ದೆಹಳ್ಳದಿಂದ ಆರಂಭಗೊಂಡು ಮಾದಾಪುರ ರಸ್ತೆಯ ಮೂಲಕ ವಾಹನ ಚಾಲಕರ ಸಂಘದ ಮುಂಭಾಗಕ್ಕೆ ತಲುಪಿತು. ನಂತರ ಮಾತನಾಡಿದ ಎಂಎಲ್ ಸಿ ಸುನಿಲ್ ಸುಬ್ರಮಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 5 ವರ್ಷದ ಸಾಧನೆಯೆಂದರೆ, ಭ್ರಷ್ಟಚಾರ, ಲಂಚಗುಳಿತನ, ಉನ್ನತ ಅಧಿಕಾರಿಗಳ ಸಾವು, ಬೆಲೆಬಾಳುವ ವಾಚು ಹಾಕಿಕೊಂಡಿದ್ದು, ಹಿಂದೂಗಳ ಮೇಲೆ ದೌರ್ಜನ್ಯ.

ಕೊಡಗಿನ ಇಬ್ಬರು ಶಾಸಕರಿಗೆ ಶಾಸಕರ ಅನುದಾನವನ್ನು ಹೊರತು ಪಡಿಸಿದರೇ ಮತ್ಯಾವ ಹಣವನ್ನು ಬಿಡುಗಡೆ ಮಾಡದಿರುವುದು ನಮ್ಮ ದೌರ್ಭಾಗ್ಯ. ಇದುವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಧರ್ಮ, ಜಾತಿಯನ್ನು ಒಡೆಯುವ ಕೆಲಸವನ್ನು ಮಾಡಿದೆಯೇ ವಿನ ಉತ್ತಮ ಅಭಿವೃದ್ಧಿ ಕೆಲಸ ನಡೆದಿಲ್ಲ. ಟಿಪ್ಪು ಜಯಂತಿಯ ಹೆಸರಿನಲ್ಲಿ ಶಾಂತಿಯುತವಾದ ಕೊಡಗನ್ನು ಕೋಮುದಳ್ಳುರಿಗೆ ದಾರಿ ಮಾಡಿಕೊಟ್ಟು ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ. ಇದು ಜನರೇ ನಿರ್ಧಾರ ಮಾಡಲಿ ಎಂದರು.

ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಂಚಲನ ಕೊಡಗಿಗೆ ಮುಟ್ಟಿದೆ. ಕೊಡಗಿನ ಭದ್ರಕೋಟೆ ಬಿಜೆಪಿ ಈ ಬಾರಿಯೂ ನಮ್ಮ ತೆಕ್ಕೆಗೆ ಬರಲಿದೆ. ನಾವು ಸಂವಿಧಾನ, ಕಾನೂನಿಗೆ ತಲೆ
ಬಾಗುವ ಪಕ್ಷದವರಾಗಿದ್ದು, ನಮಗೆ ಶಾಂತಿಯುತ ಸಮಾಜದ ಅವಶ್ಯಕತೆ ಇದೆ ಎಂದರು.

ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮದು ಸಮಪಾಲು ಸಮಬಾಳು ಪಕ್ಷವಾಗಿದ್ದು, ಎಲ್ಲರಿಗೂ ಅನುಕೂಲಕರವಾದ ಸವಲತ್ತುಗಳನ್ನು ನಮ್ಮ ಸರ್ಕಾರ ಇರುವಾಗಲೇ ಜನರಿಗೆ ಕೊಟ್ಟಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಂಧ್ಯಾ ಸುರಕ್ಷಾ ಯೋಜನೆ, ಮಕ್ಕಳಿಗೆ ಸೈಕಲ್ ಯೋಜನೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಲಿಂಗಾಯಿತ–ವೀರಶೈವರ ನಡುವೆ ಬಿರುಕು, ಹಿಂದೂ ಮುಸ್ಲಿಮರ ನಡುವೆ ವೈಷಮ್ಯ, ಹಿಂದೂ ಧರ್ಮವನ್ನು ಅವಮಾನಿಸಿದ್ದು ನೋಡಿದಾಗ ಇಂತಹ ವ್ಯಕ್ತಿಯನ್ನು, ಈ ಪಕ್ಷವನ್ನು ಮತ್ತೇ ಅಧಿಕಾರಕ್ಕೆ ತಂದರೆ ಗತಿಯೇನು ಎಂದು ಪ್ರಶ್ನಿಸಿದರು.

ದೇಶದ ಉಳಿವಿಗಾಗಿ, ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಂತಿರುವ ಬಿಜೆಪಿಯನ್ನು ಗೆಲ್ಲಿಸುವುದರೊಂದಿಗೆ ಮತ್ತೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದರೊಂದಿಗೆ ಜನರ ಸಮಸ್ಯೆಗಳನ್ನು ಪರಿಹರಿಸಲು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶಕೊಡಲು ಮನವಿ ಮಾಡಿಕೊಂಡರು.

ಮಾಜಿ ತಾ.ಪಂ.ಸದಸ್ಯ ವಿಜಯ, ಹಿರಿಯ ಮುಖಂಡ ಪಿ.ಕೆ.ಶೇಷಪ್ಪ ಮಾತನಾಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೊಮರಪ್ಪ, ಸುಂಟಿಕೊಪ್ಪ ಘಟಕದ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಮುಖಂಡರಾದ ಬಿ.ಕೆ.ಮೋಹನ್, ದಾಸಂಡ ರಮೇಶ್, ಬಿಜು, ರಂಜಿತ್ ಪೂಜಾರಿ, ನಾಗೇಶ್ ಪೂಜಾರಿ, ಧನು ಕಾವೇರಪ್ಪ, ಬಿ.ಕೆ.ಪ್ರಶಾಂತ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಾಲವತಿ,ಬಿ.ಐ ಭವಾನಿ, ಗೀತಾ ವಿಶ್ವನಾಥ್ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.