ADVERTISEMENT

ಕಾವೇರಿ ತಾಲ್ಲೂಕು ರಚನೆಗೆ ಆಗ್ರಹ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 7:29 IST
Last Updated 20 ಅಕ್ಟೋಬರ್ 2017, 7:29 IST

ಸುಂಟಿಕೊಪ್ಪ: ಕಾವೇರಿ ತಾಲ್ಲೂಕು ರಚನಾ ಹೋರಾಟ ಸಮಿತಿ ಸುಂಟಿಕೊಪ್ಪ ಹೋಬಳಿ ಘಟಕದ ಸದಸ್ಯರು ಬುಧವಾರ ಇಲ್ಲಿನ ಕನ್ನಡ ವೃತ್ತದಲ್ಲಿ ಮಾನವ ಸರಪಳಿ, ರಸ್ತೆ ತಡೆ ಮಾಡುವ ಮೂಲಕ ತಾಲ್ಲೂಕು ರಚನೆಗೆ ಆಗ್ರಹಪಡಿಸಿದರು.

ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸದಸ್ಯ ಡಿ.ನರಸಿಂಹ, ತಾಲ್ಲೂಕು ರಚನೆಗೆ ಬಹುದೊಡ್ಡ ಹೋರಾಟ ಅಗತ್ಯ. ಈಗ ಸಣ್ಣ ಕೆಲಸಗಳಿಗೂ ಸೋಮವಾರಪೇಟೆಗೆ ತೆರಳಬೇಕು. ತಾಲ್ಲೂಕು ರಚನೆಯಾದರೆ, ಜನರಿಗೆ ಆಡಳಿತಾತ್ಮಕ ದೃಷ್ಟಿಯಿಂದ ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರೀಯ ಸಮಿತಿಯ ಸದಸ್ಯ ಕೆ ಉಸ್ಮಾನ್, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಕುಶಾಲನಗರವನ್ನು ತಾಲ್ಲೂಕು ಕೇಂದ್ರವಾಗಿಸುವ ಕನಸು ಹೊಂದಿದ್ದರು. ಅವರಿಗೆ ಬೆಂಬಲ ಸಿಗಲಿಲ್ಲ. ಅದನ್ನು ನನಸಾಗಿಸಲು ಈಗ ಹೋರಾಟ ಅಗತ್ಯ ಎಂದರು.

ADVERTISEMENT

ಕುಶಾಲನಗರವನ್ನು ತಾಲ್ಲೂಕು ಆಗಿ ಘೋಷಿಸಬೇಕು. ಇಲ್ಲದಿದ್ದರೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ತಾಲ್ಲೂಕು ವಿಚಾರವಾಗಿ ಈಗ ಸಮನ್ವಯತೆ ಸೃಷ್ಟಿಯಾಗಿದೆ. ವಿವಿಧ ಸಂಘಟನೆಗಳು, ಸರ್ವ ಜನಾಂಗ, ಸರ್ವ ಧರ್ಮಿಯರು, ಜನಪ್ರತಿನಿಧಿಗಳು, ಸರ್ವ ಪ್ರಾಂತ್ಯ, ಮನೆಮನೆಗಳ ಜನ ಹೋರಾಟಕ್ಕೆ ಸಿದ್ದರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕುಶಾಲನಗರ ವ್ಯಾಪ್ತಿಯಲ್ಲಿ ತಾಲ್ಲೂಕು ಕೇಂದ್ರವಾಗಿಸುವ ಅಗತ್ಯ ಕಚೇರಿಗಳಿವೆ. ಸರ್ಕಾರಕ್ಕೆ ಹಣಕಾಸಿನ ಹೊರೆ ಬೀಳುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಕುಶಾಲನಗರ ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ಸಮಿತಿ ಗೌರವಾಧ್ಯಕ್ಷ ಯಂಕನ ಎಂ. ಕರುಂಬಯ್ಯ ಮಾತನಾಡಿದರು. ಕನ್ನಡ ವೃತ್ತದಲ್ಲಿ ಮಾನವ ಸರಪಳಿ ರಚಸಲಾಯಿತು
ತಾಲ್ಲೂಕು ರಚನೆಗೆ ಒತ್ತಾಯಿಸುವವ ಮನವಿ ಕುರಿತ ಅಂಚೆ ಕಾರ್ಡ್‌ ಅನ್ನು ಅಂಚೆ ಡಬ್ಬಿಗೆ ಹಾಕಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ತಾಲ್ಲೂಕು ರಚನಾ ಸಮಿತಿ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಕಾರ್ಯದರ್ಶಿ ಪಿ.ಆರ್.ಸುನಿಲ್ ಕುಮಾರ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರಾದ ಕೆ.ಇ.ಕರೀಂ, ಬಿ.ಎಂ.ಸುರೇಶ್, ರಜಾಕ್, ನಾಗರತ್ನಾ, ಚಂದ್ರ, ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ತಾಲ್ಲೂಕು ಹೋರಾಟ ಸಮಿತಿಯ ಅಣ್ಣಾ ಶೇರಿಪ್, ಸುರೇಶ್ ಗೋಪಿ, ಸ್ಪೂರ್ತಿ ಶೇರಿಪ್, ಅಶೋಕ್ ಶೇಟ್, ಸೌಕತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.