ADVERTISEMENT

`ಚದುರಂಗ ಆಟದಿಂದ ಮಕ್ಕಳ ಸ್ಮರಣಶಕ್ತಿ ಹೆಚ್ಚಳ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 9:21 IST
Last Updated 3 ಡಿಸೆಂಬರ್ 2012, 9:21 IST

ನಾಪೋಕ್ಲು: ಚದುರಂಗ ಆಟದಿಂದ ಏಕಾಗ್ರತೆ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ಮೂರ್ನಾಡು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಜಿ. ಗಣೇಶ್ ಹೇಳಿದರು. ಸಮೀಪದ ಮೂರ್ನಾಡು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಚದುರಂಗ ದಿನಾಚರಣೆಯಲ್ಲಿ  ಮಾತನಾಡಿದ ಅವರು, ನಮ್ಮ ದೇಶದಲ್ಲಿಯೇ ಜನ್ಮ ತಳೆದು ಪುರಾತನ ಕಾಲದಲ್ಲಿಯೇ  ಉಲ್ಲೆೀಖವಾಗಿರುವ ಚದುರಂಗ ಯುದ್ಧದ ಸನ್ನಿವೇಶವನ್ನು ಪ್ರದರ್ಶಿಸುವ ಆಟವಾಗಿದೆ ಎಂದರು.

ಶಿಕ್ಷಕ ಎಸ್. ಡಿ. ಪ್ರಶಾಂತ್ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎ. ಎಸ್. ರಶ್ಮಿ ವಹಿಸಿದ್ದರು. ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.