ADVERTISEMENT

ದಸರಾ ಸಮಿತಿ ಸಭೆಯಲ್ಲಿ ವಾಗ್ಯುದ್ಧ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 5:15 IST
Last Updated 31 ಆಗಸ್ಟ್ 2011, 5:15 IST
ದಸರಾ ಸಮಿತಿ ಸಭೆಯಲ್ಲಿ ವಾಗ್ಯುದ್ಧ
ದಸರಾ ಸಮಿತಿ ಸಭೆಯಲ್ಲಿ ವಾಗ್ಯುದ್ಧ   

ಗೋಣಿಕೊಪ್ಪಲು: ಮಂಗಳವಾರ ನಡೆದ ಕಾವೇರಿ ದಸರಾ ಸಮಿತಿ ಸಭೆ ಯಲ್ಲಿ ಲೆಕ್ಕಪತ್ರದ ವಿಷಯವಾಗಿ ಬಿಸಿ ಬಿಸಿ ಚರ್ಚೆ ನಡೆಯಿತು.

ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಲೆಕ್ಕಪತ್ರ ಮಂಡಿಸಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್, ಸರ್ಕಾರದಿಂದ ರೂ.15ಲಕ್ಷ ಅನುದಾನ ಬಂದಿತ್ತು. ಸಾರ್ವಜನಿಕರಿಂದ 1,63, 771 ರೂಪಾಯಿ ಸಂಗ್ರಹವಾಗಿತ್ತು. 28,678 ರೂಪಾಯಿ ಬಾಕಿ ಉಳಿದಿದೆ~ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಎ.ವೆಂಕಟೇಶ್, `ಪ್ರಕಾಶ್ ದಸರಾ ಉತ್ಸವಕ್ಕೆಂದು ಸಂಸದ ಅನಿಲ್ ಲಾಡ್ ಮತ್ತು ಬೆಂಗಳೂರಿನ ಶಾಸಕ ಕೃಷ್ಣಪ್ಪ ಅವರಿಂದ ಕೋಟಿಗಟ್ಟಲೆ ಹಣ ಸಂಗ್ರ ಹಿಸಿದ್ದಾರೆ. ನಕಲಿ ರಸೀತಿ ಪುಸ್ತಕ ಇಟ್ಟು ಕೊಂಡು ಲೆಕ್ಕ ಪತ್ರದಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ~ ಎಂದು  ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಪ್ರಕಾಶ್, `ಇದರ ಬಗ್ಗೆ ಆಧಾರಗಳಿದ್ದರೆ  ದಯ ವಿಟ್ಟು ಒಪ್ಪಿಸಿ. ಅನಗತ್ಯವಾಗಿ ತೇಜೋ ವಧೆ  ಮಾಡಬೇಡಿ. ನಾವು ಯಾರಿಂ ದಲೂ ಖಾಸಗಿಯಾಗಿ ಹಣ ಪಡೆದಿಲ್ಲ. ದೇವರ ಹೆಸರಿನಲ್ಲಿ ಹಣ ಬೇಡಿ  ಬದು ಕುವ ಕೀಳು ಮಟ್ಟಕ್ಕೆ ತಾವು ಇಳಿದಿಲ್ಲ. ಈ ಬಗ್ಗೆ ಯಾವುದೇ ತನಿಖೆಗೂ  ಸಿದ್ಧ~  ಎಂದು  ಸವಾಲು ಹಾಕಿದರು.

 ಪ್ರಕಾಶ್ ಅವರನ್ನು ಬೆಂಬಲಿಸಿ ಮಾತನಾಡಿದ ಸಾರ್ವಜನಿಕರು ಆಧಾರ ರಹಿತ ಆರೋಪ ಸಲ್ಲದು. ಇದರ ಬಗ್ಗೆ ದಾಖಲೆಗಳಿದ್ದರೆ  ಒಪ್ಪಿಸಿ ಎಂದು ವೆಂಕಟೇಶ್ ಅವರನ್ನು ಒತ್ತಾಯಿಸಿ ದರು. ಈ ಸಂದರ್ಭದಲ್ಲಿ  ಕೆಲಹೊತ್ತು ಪರಸ್ಪರ ಮಾತಿನ ಚಕಮಕಿ ನಡೆಯಿತು.

ಅಧ್ಯಕ್ಷತೆ ವಹಿದ್ದ ಅಧ್ಯಕ್ಷ ಕೊಪ್ಪೀರ ಸನ್ನಿ ಸೋಮಯ್ಯ ಮಾತನಾಡಿ, `ಎಂ.ಕೆ.ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ  ಸ್ಥಳೀಯ ಮರ್ಚೇಂಟ್ ಬ್ಯಾಂಕಿನಿಂದ ದಸರಾ ಉತ್ಸವಕ್ಕೆ ಕಳೆದ 7ವರ್ಷಗಳ ಹಿಂದೆ ರೂ.16ಸಾವಿರ ಸಾಲ ಪಡೆಯ ಲಾಗಿತ್ತು. ಇದನ್ನು ಮರು ಪಾವತಿಸಲು ಬ್ಯಾಂಕಿನಿಂದ  ಇದೀಗ ನೊಟೀಸ್ ಬಂದಿದೆ~ ಎಂದು ತಿಳಿಸಿದರು.

`ಕಳೆದ 7ವರ್ಷಗಳಿಂದ  ಈ ಸಾಲ ಏಕೆ ಮರು ಪಾವತಿಸಲ್ಲ್ಲಿಲ~ ಎಂದು  ಸಾರ್ವಜನಿಕರು ಪ್ರಶ್ನಿಸಿದಾಗ ಉತ್ತರಿಸಿದ ಸೋಮಯ್ಯ, `ಸಾಲದ ಬಗ್ಗೆ ತಮಗೆ ತಿಳಿದಿರಲಿಲ್ಲ. ಇದೀಗ ನೋಟೀಸ್ ಬಂದ ನಂತರ  ತಿಳಿದು ಬಂದಿತು~ ಎಂದರು.

ಮುಂದಿನ ಸಾಲಿನ ದಸರಾ ಉತ್ಸವದ ಪದಾಧಿಕಾರಿಗಳ  ಆಯ್ಕೆ ಸಂಬಂಧ ಗ್ರಾ.ಪಂ.ಅಧ್ಯಕ್ಷ ರಾಜೇಶ್ ಅವರಿಗೆ ಸೋಮಯ್ಯ ಅಧಿಕಾರ ಹಸ್ತಾಂತರಿಸಿದರು. ಮುಂದಿನ ದಿನ ಗಳಲ್ಲಿ ನೂತನ ಸಮಿತಿ ರಚಿಸ ಲಾಗುವುದು ಎಂದು ತಿಳಿಸಿದರು.

 ಸಭೆಯಲ್ಲಿ  ಹಿಂದಿನ ಸಾಲಿನ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳಾದ ಎಂ.ಪಿ.ಕೇಶವ ಕಾಮತ್, ಪೊನ್ನಿಮಾಡ ಸುರೇಶ್, ರಾಜಶೇಖರ್, ಕಬ್ಬಚ್ಚೀರ ಪ್ರಭು, ಗಿರೀಶ್ ಗಣಪತಿ, ಗ್ರಾ.ಪಂ. ಉಪಾಧ್ಯಕ್ಷೆ  ಬೋಜಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.