ADVERTISEMENT

ಮಳೆ ಮಾಯ; ಮತ್ತೆ ಬಿಸಿಲ ಛಾಯೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 10:04 IST
Last Updated 6 ಜೂನ್ 2013, 10:04 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ಕಡಿಮೆಯಾಗಿದೆ. ಮಡಿಕೇರಿಯಲ್ಲಿ ದಿನವಿಡೀ ಬಿಸಿಲಿನ ಛಾಯೆ ಆವರಿಸಿತ್ತು. ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಕಂಡು ಬಂದಿತು.

ಜಿಲ್ಲೆಯ ನಾಪೋಕ್ಲು, ಸಂಪಾಜೆ, ಪೊನ್ನಂಪೇಟೆ, ಶಾಂತಳ್ಳಿ, ಭಾಗಮಂಡಲ ತಲಕಾವೇರಿ ಸೇರಿದಂತೆ ಮತ್ತಿತರ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯ ಅವಧಿಯಲ್ಲಿ 1.74ಮಿ.ಮೀ. ಸರಾಸರಿ ಮಳೆಯಾಗಿದೆ.  ಜನವರಿಯಿಂದ ಇಲ್ಲಿಯವರೆಗೆ  227.25 ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 1.70ಮಿ.ಮೀ. ಸರಾಸರಿ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 310.89 ಮಿ.ಮೀ. ಮಳೆಯಾಗಿದೆ. ವೀರಾಜಪೇಟೆ ತಾಲ್ಲೂಕಿನಲ್ಲಿ 3.52 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಮಳೆ 149.46 ಮಿ.ಮೀ. ಮಳೆ ದಾಖಲಾಗಿದೆ.

ಹೋಬಳಿವಾರು ವಿವರ: ನಾಪೋಕ್ಲು 3.80  ಮಿ.ಮೀ., ಸಂಪಾಜೆ 1.40 ಮಿ.ಮೀ., ಭಾಗಮಂಡಲ 1  ಮಿ.ಮೀ., ವಿರಾಜಪೇಟೆ ಕಸಬಾ 6.20 ಮಿ.ಮೀ., ಹುದಿಕೇರಿ 2.30 ಮಿ.ಮೀ., ಪೊನ್ನಂಪೇಟೆ 11.60 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯದ ನೀರಿನಮಟ್ಟ: ಹಾರಂಗಿ ಜಲಾಶಯದ ಗರಿಷ್ಠಮಟ್ಟ 2,859 ಅಡಿಗಳು, ಇಂದಿನ ನೀರಿನಮಟ್ಟ 2801 ಅಡಿಗಳು. ಕಳೆದ ವರ್ಷ ಇದೇ ದಿನ 2806.39 ಅಡಿ ನೀರು ಸಂಗ್ರಹವಾಗಿತ್ತು. ಇಂದಿನ ನೀರಿನ ಒಳಹರಿವು 124.00 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 16.00 ಕ್ಯೂಸೆಕ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.