ADVERTISEMENT

ವಾರ್ಷಿಕೋತ್ಸವದಲ್ಲಿ ಮಕ್ಕಳ ಕಲರವ

ಸಿ.ಎಸ್.ಸುರೇಶ್
Published 12 ಜನವರಿ 2013, 7:03 IST
Last Updated 12 ಜನವರಿ 2013, 7:03 IST
ವಾರ್ಷಿಕೋತ್ಸವದಲ್ಲಿ ಮಕ್ಕಳ ಕಲರವ
ವಾರ್ಷಿಕೋತ್ಸವದಲ್ಲಿ ಮಕ್ಕಳ ಕಲರವ   

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯಲ್ಲಿ ಈಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿತು.

ವಿದ್ಯಾ ಸಂಸ್ಥೆಯ ಆಶ್ರಯದಲ್ಲಿರುವ ಆಂಗ್ಲ ಪ್ರಾಥಮಿಕ ಶಾಲೆ ಮತ್ತು ಕನ್ನಡ ಮಾಧ್ಯಮದ ನೇತಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಗೆಬಗೆಯ ನೃತ್ಯ ಪ್ರದರ್ಶಿಸಿ ವೀಕ್ಷಕರನ್ನು ರಂಜಿಸಿದರು. ವಿವಿಧ ವಯೋಮಾನದ ವಿದ್ಯಾರ್ಥಿಗಳು ಜನಪದ ನೃತ್ಯ ಹಾಗೂ ಚಲನಚಿತ್ರ ಹಾಡುಗಳಿಗೆ ಹೆಜ್ಜೆ ಹಾಕಿದರು.

ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ನೃತ್ಯ ಹಾಗೂ ಎಲ್.ಕೆ.ಜಿ. ಪುಟಾಣಿಗಳ ಬಲೂನ್ ನೃತ್ಯ ಗಮನ ಸೆಳೆಯಿತು. ಪ್ರೌಢಶಾಲೆಯ ವಿದ್ಯಾರ್ಥಿಗಳು ಜನಪದ ಹಾಡಿಗೆ ಆಕರ್ಷಕವಾಗಿ ಹೆಜ್ಜೆಹಾಕಿ ವೀಕ್ಷಕರನ್ನು ರಂಜಿಸಿದರು.

ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಬಾಳ ಒಳ್ಳೇವ್ರ ನಮ್ಮಿಸ್ಸು...' ಹಾಡಿಗೆ ಅಭಿನಯಿಸಿದರು. ಚಲನಚಿತ್ರ ಗೀತೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು.

ನಂತರ ವೇದಿಕೆ ಏರಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು `ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ...' ಎಂಬ ಹಾಡಿಗೆ ಫ್ಯಾಷನ್ ಫೆರೇಡ್ ಪ್ರದರ್ಶಿಸಿ ದೇಶದ ಜನರಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಎಂಬುದನ್ನು ಪ್ರದರ್ಶಿಸಿದರು. ತಿಳಿ ಹಾಸ್ಯದಿಂದ ಕೂಡಿದ್ದ `ಅತ್ತೆ ಮತ್ತು ಅಳಿಯ'ನ ಸಂವಾದ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಪ್ರೌಢಶಾಲಾ ವಿದ್ಯಾರ್ಥಿಗಳ ತರಕಾರಿ ರಸಮಂಜರಿ ವಿಭಿನ್ನತೆಯಿಂದ ಕೂಡಿತ್ತುತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.