ADVERTISEMENT

`ಸತತ ಪರಿಶ್ರಮದಿಂದ ಸಾಧನೆ ಸಾಧ್ಯ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:16 IST
Last Updated 4 ಏಪ್ರಿಲ್ 2013, 6:16 IST

ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸತತ ಪರಿಶ್ರಮ ಪಡಬೇಕು. ಯಾವುದೇ ಕೀಳರಿಮೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬಾರದು ಎಂದು ಕಾಪ್ಸ್‌ನ ನಿರ್ದೇಶಕರಾದ ಪ್ರೊ.ಎಂ.ಡಿ ನಂಜುಂಡ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನದ ದಾಹವಿರಬೇಕು. ವಿದ್ಯಾಭ್ಯಾಸದೊಂದಿಗೆ ಪ್ರಾಪಂಚಿಕ ಜ್ಞಾನ ಹೆಚ್ಚಿಸಿಕೊಂಡು ಸಾಮಾಜಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ಸರ್ಕಾರಿ ಕಾಲೇಜೆಂಬ ಕೀಳರಿಮೆ ಇಲ್ಲದೇ ಪರಿಶ್ರಮಪಟ್ಟು ಅಧ್ಯಯನ ಮಾಡಿ ಸಾಧನೆಗೈಯಬೇಕೆಂದು ಆಶಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಬೋಸ್ ದೇವಯ್ಯ ಮಾತನಾಡಿ, ಉತ್ತಮ ಫಲಿತಾಂಶದೊಂದಿಗೆ ಕಾಲೇಜಿಗೆ ಕೀರ್ತಿ ತರಬೇಕು. ಸಾಮಾಜಿಕ ಕಾಳಜಿಯನ್ನು ಹೊಂದಿ ಸಮಾಜ ಸೇವೆಗೆ ಸಿದ್ಧರಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ವಿ ಅಪ್ಪಾಜಿ ಮಾತನಾಡಿ, ಎಲ್ಲ ಅಧ್ಯಾಪಕರೂ ಮತ್ತಷ್ಟು ಶ್ರಮವಹಿಸಿ ಕಾಲೇಜು ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ಎಸ್.ವಿ ಅಪ್ಪಾಜಿ ಮಾತನಾಡಿದರು. ಡಾ. ಡಿ.ಕೆ ಸರಸ್ವತಿಯವರು ಕಾಲೇಜು ವರದಿ ಓದಿದರು. ಪ್ರೊ.ಬಸವರಾಜು ಅವರು ಕಾಲೇಜಿನ ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್ ವರದಿ ಓದಿದರು.

ಸಾಂಸ್ಕೃತಿಕ ಸಂಚಾಲಕರಾದ ಪ್ರೊ.ಎಂ.ಆರ್ ಕಾವೇರಪ್ಪ ಸ್ವಾಗತಿಸಿದರು. ಕಾರ‌್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ರಜಿನಿ ಮತ್ತು ಕವಿತಾ ನೆರವೇರಿಸಿದರು. ವಿದ್ಯಾರ್ಥಿ ನಾಯಕ ನಾಚಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.