ADVERTISEMENT

ಸಭೆ ನಡೆಸಲು ಆನ್‌ಲೈನ್‌ ಅನುಮತಿ

ವಿಧಾನಸಭಾ ಚುನಾವಣೆ ‘ಸಮಾಧಾನ್‌, ಸುವಿಧ’ ತಂತ್ರಾಂಶದ ಮಾಹಿತಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:36 IST
Last Updated 11 ಏಪ್ರಿಲ್ 2018, 11:36 IST
ವಿರಾಜಪೇಟೆಯ ಮಿನಿವಿಧಾನಸೌಧದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಂಗಳವಾರ ನಡೆದ ‘ಸಮಾಧಾನ್‌, ಸುವಿಧ’ ತಂತ್ರಾಂಶದ ಮಾಹಿತಿ ಸಭೆಯಲ್ಲಿ ಚುನಾವಣಾಧಿಕಾರಿ ಕೆ.ರಾಜು ಮಾತನಾಡಿದರು
ವಿರಾಜಪೇಟೆಯ ಮಿನಿವಿಧಾನಸೌಧದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಂಗಳವಾರ ನಡೆದ ‘ಸಮಾಧಾನ್‌, ಸುವಿಧ’ ತಂತ್ರಾಂಶದ ಮಾಹಿತಿ ಸಭೆಯಲ್ಲಿ ಚುನಾವಣಾಧಿಕಾರಿ ಕೆ.ರಾಜು ಮಾತನಾಡಿದರು   

ವಿರಾಜಪೇಟೆ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ನೀತಿಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಪಾಲಿಸಬೇಕು ಎಂದು ಚುನಾವಣಾಧಿಕಾರಿ ಕೆ.ರಾಜು ಸೂಚಿಸಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇಲ್ಲಿನ ಮಿನಿವಿಧಾನಸೌಧದಲ್ಲಿ ಮಂಗಳವಾರ ನಡೆದ ‘ಸಮಾಧಾನ್‌, ಸುವಿಧ’ ತಂತ್ರಾಂಶದ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆ, ಪ್ರಚಾರಕ್ಕೆ ಧ್ವನಿವರ್ಧಕ ಬಳಸಲು 48 ಗಂಟೆಗಳ ಮುಂಚಿತವಾಗಿ ಕ್ಷೇತ್ರದ ಚುನಾವಣಾಧಿಕಾರಿಯಿಂದ ‘ಸುವಿಧ’ ತಂತ್ರಾಂಶದಲ್ಲಿ ಅನುಮತಿ ಪಡೆಯಬಹುದು. ಪಕ್ಷದ ಪ್ರತಿನಿಧಿಗಳು ಚುನಾವಣಾ ಅಧಿಕಾರಿಗಳ ಕಚೇರಿಗೆ ಬಾರದೇ ಅಂತರ್ಜಾಲದಲ್ಲಿಯೇ ದಾಖಲೆಗಳನ್ನು ಸಲ್ಲಿಸಿ ಸಭೆ ನಡೆಸಲು ಅನುಮತಿ ಪಡೆಯಲು ಅವಕಾಶವಿದೆ ಎಂದರು.

ADVERTISEMENT

ರಾಜಕೀಯ ಪಕ್ಷಗಳು ಮನೆಯಿಂದ ಮನೆಗೆ ಪ್ರಚಾರ ಕೈಗೊಳ್ಳುವ ಸಮಯದಲ್ಲಿಯೂ ಐದು ಮಂದಿಯ ಮಿತಿಯೊಳಗಿರಬೇಕು. ಸಾಕಷ್ಟು ಜನರನ್ನು ಕರೆದುಕೊಂಡು ಜಾತ್ರೆಯಂತೆ ಪ್ರಚಾರ ಮಾಡಲು ಅವಕಾಶವಿಲ್ಲ. ಪೂರ್ವಾನುಮತಿ ಪಡೆದ ನಂತರ ಸಭೆ–ಸಮಾರಂಭಗಳ ಖರ್ಚು–ವೆಚ್ಚಗಳನ್ನು ತಪ್ಪದೇ ಚುನಾವಣಾ ಕಚೇರಿಯಲ್ಲಿ ದಾಖಲಿಸಬೇಕು. ಅನುಮತಿ ಪಡೆಯಲು ‘ಸಮಾಧಾನ್, ಸುವಿಧ’ ತಂತ್ರಾಂಶ ಸರಳ ವಿಧಾನ ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಆರ್.ಗೋವಿಂದರಾಜು, ಡಿವೈಎಸ್‌ಪಿ ನಾಗಪ್ಪ, ನೋಡೆಲ್ ಅಧಿಕಾರಿ ಪ್ರಭು, ಚುನಾವಣಾ ಸಿಬ್ಬಂದಿ ಇದ್ದರು. ನೀತಿ ಸಂಹಿತೆಯ ಕುರಿತು ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.