ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಇಳಿಮುಖಗೊಂಡಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ. ಜಲಾವೃತವಾಗಿದ್ದ ರಸ್ತೆ, ತಗ್ಗುಪ್ರದೇಶಗಳಲ್ಲಿ ಪ್ರವಾಹ ಇಳಿಕೆಯಾಗಿದೆ. ಸಂಚಾರ ಮುಕ್ತವಾಗಿವೆ.
ಬಲಮುರಿಯ ಕಿರು ಸೇತುವೆಯಲ್ಲಿ ಮಾತ್ರ ನೀರು ತುಂಬಿ ಹರಿಯುತ್ತಿದೆ.
ಬಿರುಸಿನ ಮಳೆಯಿಂದಾಗಿ ಸಮೀಪದ ಕಕ್ಕಬ್ಬೆಯಲ್ಲಿ ಕಕ್ಕಬ್ಬೆ ಹೊಳೆಯು ಮೈದುಂಬಿ ಹರಿದು ಕಕ್ಕಬ್ಬೆಯಿಂದ ತೆರಳುವ ಎಲ್ಲಾ ರಸ್ತೆಗಳು ಜಲಾವೃತಗೊಂಡಿದ್ದವು. ಕಕ್ಕಬ್ಬೆಯಿಂದ ಕುಂಜಿಲ ಪೈನರಿ ದರ್ಗಾಕ್ಕೆ ತೆರಳುವ ರಸ್ತೆ, ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆ, ನಾಪೋಕ್ಲು -ವಿರಾಜಪೇಟೆಗೆ ತೆರಳುವ ಮುಖ್ಯರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಮೂರ್ನಾಡು ರಸ್ತೆಯ ಬೊಳಿಬಾಣೆ ಬಳಿಯಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದ ಬೊಳಿಬಾಣೆಯಲ್ಲಿ ಪ್ರವಾಹ ಇಳಿಕೆಯಾಗಿ ಸಂಪರ್ಕ ಸಾಧ್ಯವಾಗಿದೆ.ನಾಪೋಕ್ಲು- ಕೈಕಾಡು -ಪಾರಾಣೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ, ಕೈಕಾಡು ರಸ್ತೆಯಲ್ಲಿರುವ ಎತ್ತು ಕಡವು ಹೊಳೆ ರಸ್ತೆಯಲ್ಲಿ, ಬೇತು ಗ್ರಾಮದ ಮೂಲಕ ಬಲಮುರಿ ಗ್ರಾಮಕ್ಕೆ ಸಂಪರ್ಕಿಸುವ ಮಕ್ಕಿ ಕಡವು ಎಂಬಲ್ಲಿ ರಸ್ತೆಯಲ್ಲೂವಾಹನಸಂಚಾರಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.