ADVERTISEMENT

ಅ.17ರಂದು ‘ಕಾವೇರಿ ತೀರ್ಥೋದ್ಭವ’ 

ಮಧ್ಯಾಹ್ನ 1.11ಕ್ಕೆ ತೀರ್ಥರೂಪಿಣಿಯಾಗಿ ಒಲಿಯುವ ಕಾವೇರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 11:19 IST
Last Updated 30 ಸೆಪ್ಟೆಂಬರ್ 2021, 11:19 IST
ಅ.17ರಂದು ‘ಕಾವೇರಿ ತೀರ್ಥೋದ್ಭವ’ 
ಅ.17ರಂದು ‘ಕಾವೇರಿ ತೀರ್ಥೋದ್ಭವ’    

ಮಡಿಕೇರಿ: ಈ ವರ್ಷ ಕಾವೇರಿ ತೀರ್ಥೋದ್ಭವವು ಅ.17ರ ಭಾನುವಾರ ನಡೆಯಲಿದ್ದು, ಅಂದು ಭಕ್ತರಿಗೆ ಕಾವೇರಿ ತೀರ್ಥರೂಪಿಣಿಯಾಗಿ ಒಲಿಯಲಿದ್ದಾಳೆ. ಅಂದು ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ಕಾವೇರಿಯ ತೀರ್ಥೋದ್ಭವಕ್ಕೆ ಸಮಯ ನಿಗದಿಯಾಗಿದೆ.

ಈಗಾಗಲೇ ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆಗೆ ಚಾಲನೆ ಸಿಕ್ಕಿದೆ. ಅ.4ರ ಬೆಳಿಗ್ಗೆ 10.35ಕ್ಕೆ ವೃಚ್ಛಿಕ ಲಗ್ನದಲ್ಲಿ ‘ಅಜ್ಞಾ ಮುಹೂರ್ತ’ ನಡೆಯಲಿದೆ. 14ರಂದು ಮಧ್ಯಾಹ್ನ 12.05ರ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಇಡುವುದು ಹಾಗೂ ಅಂದೇ ಮಧ್ಯಾಹ್ನ 1.25ಕ್ಕೆ ಕಾಣಿಕೆ ಡಬ್ಬಿಯಿಡುವ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಭಾಗಮಂಡಲ ಹಾಗೂ ತಲಕಾವೇರಿ ದೇವಾಯಲದ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

ಪ್ರತಿವರ್ಷ ತೀರ್ಥೋದ್ಭವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದರು. ಆದರೆ, ಕೋವಿಡ್ ಕಾರಣಕ್ಕೆ ಕಾವೇರಿ ತುಲಾ ಸಂಕ್ರಮಣ ಜಾತ್ರೆಯು ಈ ವರ್ಷವೂ ಸರಳವಾಗಿ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.