ಮಾಲೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದಾಗಿ ಪುರಸಭೆ ಮಾಜಿ ಸದಸ್ಯ ಮುನಿವೆಂಕಟಪ್ಪ ತಿಳಿಸಿದರು.
ಪಟ್ಟಣದ 3ನೇ ವಾರ್ಡ್‌ನಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮ ಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ವಾರ್ಡ್ ಮುಖಂಡರಾದ ಪಿ.ವೆಂಕಟೇಶ್ (ಗಿರಿ), ಸುಬ್ರಮಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯದರ್ಶಿ ಎಸ್.ಎನ್.ರಘುನಾಥ್, ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ. ಮುನಿರಾಜು, ಕೆ.ಎಚ್.ಚನ್ನರಾಯಪ್ಪ, ಉಪಾಧ್ಯಕ್ಷ ರಾಜ್ ಗೋಪಾಲರೆಡ್ಡಿ, ಪುರಸಭೆ ಸದಸ್ಯರಾದ ಸಿ.ಲಕ್ಷ್ಮೀ ನಾರಾಯಣ್, ಸಿ.ಪಿ.ವೆಂಕಟೇಶ್, ಮಾಜಿ ಸದಸ್ಯ ಕೋಳಿನಾರಾಯಣ, ಅಪ್ಸರ್ ಪಾಷಾ, ಸುರೇಶ್ ಕುಮಾರ್, ಮುಖಂಡರಾದ ಟಿ.ಬಿ.ಕೃಷ್ಣಪ್ಪ, ಚನ್ನಕೇಶವ , ಜೂಡೋ ರಮೇಶ್, ಸಂಪತ್ ಯಾದವ್, ಶಬ್ಬೀರ್, ಜಯಂತಿ ಶೈಲು, ಉಮಾದೇವಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.