ADVERTISEMENT

`ನೌಕರರತ್ತ ನೌಕರ ಸಂಘ' ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 7:06 IST
Last Updated 4 ಸೆಪ್ಟೆಂಬರ್ 2013, 7:06 IST

ಮುಳಬಾಗಲು: ಸರ್ಕಾರಿ ನೌಕರರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಜೊತೆಗೆ ನೌಕರರ ಹಿತರಕ್ಷಣೆಗಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ `ನೌಕರರತ್ತ ನೌಕರ ಸಂಘ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಜಗದೀಶ್ ಸೋಮವಾರ ನಡೆದ ಸಭೆಯಲ್ಲಿ ತಿಳಿಸಿದರು.

ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ಜೊತೆ ಅದಕ್ಕೆ ಪರಿಹಾರವನ್ನು ಕಾರ್ಯಕ್ರಮದಲ್ಲಿ ಸೂಚಿಸಲಾಗುತ್ತದೆ ಎಂದರು. ಶಿಕ್ಷಕರ ವೈದ್ಯಕೀಯ ವೆಚ್ಚವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು, ಕಾಲ ಮಿತಿ ಬಡ್ತಿಗೆ  ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಿಂಗಳಿಗೆ ಎರಡು ಸಾರಿ ಶಿಕ್ಷಕರ ಸಮಸ್ಯೆಗಳನ್ನು ಚರ್ಚಿಸಲು ನೌಕರರ ಸಂಘದ ಪ್ರತಿನಿಧಿಗಳ ಸಭೆ ಕರೆಯಬೇಕು. ಗಣತಿ, ಅಕ್ಷರ ದಾಸೋಹ, ಮತದಾರರ ಪಟ್ಟಿ ಪರಿಷ್ಕರಣೆ ರಜಾಅವಧಿ ಕೆಲಸಗಳನ್ನು ಶಿಕ್ಷಕರ ಸೇವಾ ಪುಸ್ತಕದಲ್ಲಿ ನಮೂದಿಸಿ, ಇಎಲ್ ಬಿಲ್ಲುಗಳನ್ನು ನಿಗದಿತ ಅವಧಿಯೊಳಗೆ ನಗದೀಕರಿಸಲು ಸೂಚಿಸಲಾಯಿತು.

ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದ ಬಿಇಒ ದೇವರಾಜು ಮುಂದಿನ ಸಭೆಯೊಳಗಾಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಮಂಜುನಾಥ್, ತಿಮ್ಮರಾಜು, ಚಂಗಲರಾಯಪ್ಪ, ಜಿ.ಅನಸೂಯಮ್ಮ, ಫೈಜುಲ್ಲಾ, ಕೆ.ವಿ.ಜಗನ್ನಾಥ್, ಕಾರ್ಯದರ್ಶಿ ಎಂ.ಶಿವಣ್ಣ, ಮಹಮದ್ ಜುಬೇರ್, ಎನ್.ಸುಬ್ರಮಣಿ, ಎಂ.ಕನ್ನಾಗಪ್ಪ, ಓಬಳರೆಡ್ಡಿ, ಸುರೇಶ್, ಶಿಕ್ಷಣ ಸಂಯೋಜಕರಾದ ಕೆ.ಬಿ.ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.