ADVERTISEMENT

ಮನೆ ಹಕ್ಕುಪತ್ರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 8:30 IST
Last Updated 19 ಅಕ್ಟೋಬರ್ 2011, 8:30 IST

ಕೋಲಾರ: ಮನೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಮಾಲೂರು ತಾಲ್ಲೂಕಿನ ತೃಣಸಿ ಗ್ರಾಮ ಪಂಚಾ ಯಿತಿಯ ಪಿಚ್ಚ ಗುಂಟರ‌್ಲಹಳ್ಳಿಯ ಪರಿಶಿಷ್ಟ ಸಮುದಾಯದ ಜನತೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಧರಣಿ ನಡೆಸಿದರು.

`ಹಳ್ಳಿಯಲ್ಲಿ ಸುಮಾರು 60-70 ಮನೆಗಳಿವೆ. 30-35 ಮಂದಿಗೆ ಮನೆ ಗಳಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡ ಬಳಿಕ ಅವರು ವಾಸವಿದ್ದ ಸರ್ಕಾರಿ ಜಮೀನಿನ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟರು. ಈಗ  ನೆಲಿಸಬೇಕಾದ ಪರಿಸ್ಥಿತಿ ಇದೆ ಎಂದು ದೂರಿದರು.

ಆದರೆ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ನಮಗೆ ರಕ್ಷಣೆ ನೀಡುವ ಬದಲು ಮುನಿರಾಜು ಮತ್ತಿತರರಿಗೆ ರಕ್ಷಣೆ ನೀಡುತ್ತಿದ್ದಾರೆ. ಹಕ್ಕುಪತ್ರ ಇಲ್ಲದಿರುವುದರಿಂದಲೇ ನಮಗೆ ತೊಂದರೆಯಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಡಿ.ವಿ.ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ವೆಂಕಟರಮಣಪ್ಪ, ಮುರಳಿ,  ತಾಪಂ ಸದಸ್ಯ ಚಂದ್ರಪ್ಪ, ಖಲೀಲ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.