ADVERTISEMENT

ಮಳೆ ಸದ್ಯಕ್ಕೆ ಉತ್ತಮ: ಹೆಚ್ಚಿದ ನಿರೀಕ್ಷೆ

ಚೇತರಿಕೆ ಕಾಣುತ್ತಿರುವ ರಾಗಿ ಬೆಳೆ, ಸೊರಗಿದ ನೆಲಗಡಲೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 5:45 IST
Last Updated 12 ಸೆಪ್ಟೆಂಬರ್ 2013, 5:45 IST

ಕೋಲಾರ: ಜಿಲ್ಲೆಯಲ್ಲಿ ಹತ್ತು ದಿನ­ದಿಂದ ಆಗಾಗ್ಗೆ ಬೀಳುತ್ತಿರುವ ಮಳೆಯು ರೈತರಲ್ಲಿ ಆಶಾಭಾವನೆ­ಯನ್ನು ಮೂಡಿ­ಸುತ್ತಿದೆ. ಮಳೆ ಇಲ್ಲದೆ ಸೊರಗಿದ್ದ ಜಿಲ್ಲೆಯ ಪ್ರಧಾನ ಬೆಳೆ­ಯಾದ ರಾಗಿ ಮತ್ತು ಪೂರ್ಣ ಬೆಳೆ­ಯಾದ ತೊಗರಿ ಚೇತ­ರಿಕೆ ಕಂಡಿದೆ,  ಮಳೆ ಪರಿಣಾಮ ಬೆಳೆನಷ್ಟದ ಪ್ರಮಾ­ಣವೂ ಕಡಿಮೆ ಆಗುವ ಸಾಧ್ಯತೆ ಇದೆ.

ಆದರೂ, ಇನ್ನು ಮುಂದೆ ಸಮರ್ಪಕ ಮಳೆಯಾದಲ್ಲಿ ಮಾತ್ರ ಉತ್ತಮ ಫಸಲನ್ನು ನಿರೀಕ್ಷಿಸಬೇಕಾದ ಸನ್ನಿವೇಶ­ವಿದೆ. ನೆಲಗಡಲೆ ಬೆಳೆಯು ಮಳೆ ಇಲ್ಲದೆ ಹೆಚ್ಚು ಒಣಗಿರುವುದರಿಂದ ಈಗಿನ ಮಳೆ­ಯಿಂದಲೂ ಅದಕ್ಕೆ ಹೆಚ್ಚು ಅನುಕೂಲ ಆಗುತ್ತಿಲ್ಲ. ಹೀಗಾಗಿ ಇತ್ತೀ­ಚಿನ ಮಳೆ­ಯು ರೈತ ಸಮು­ದಾಯ­ದಲ್ಲಿ ಹೆಚ್ಚಿನ ನಿರೀಕೆ್ಷಯನ್ನು ಹುಟು್ಟಹಾಕಿದೆ.

ಜಿಲ್ಲೆಯ ಒಟ್ಟಾರೆ ವಿಸ್ತೀರ್ಣದಲ್ಲಿ  ಶೇ 70ರಷ್ಟು ಬಿತ್ತನೆ ಈಗಾಗಲೇ ಆಗಿದು್ದ, ಮಳೆ ಮುಂದುವರಿದರೆ ಉಳಿದ ಶೇ 30ರಷ್ಟು ಪ್ರದೇಶದಲ್ಲಿ ಹಿಂಗಾರು ಬಿತ್ತನೆಗೆ ಸೂಕ್ತ ವಾತಾ­ವರಣ ಉಂಟಾ­ಗುತ್ತದೆ. ಆಗಲೂ, ಮಳೆ ಕಡಿಮೆ­ಯಾದರೂ ಬೆಳೆ­ಯು­ವಂಥ ಅಲ್ಪಾವಧಿ ಬೆಳೆಗಳಾದ ಹುರುಳಿ, ಅಲಸಂದೆ ಬೆಳೆಯಲು ಸಾಧ್ಯವಷ್ಟೆ.

ಮೇ--- ಜೂನ್‍ ತಿಂಗಳಲ್ಲಿ ಬಿತ್ತನೆ ಮಾಡಿದ್ದ ತೊಗರಿಯು ಮಳೆ ಹಿನ್ನಡೆ­ಯಿಂದ ಹೆಚ್ಚಿಗೆ ಬಾಡಿದು್ದ, ಈಗ  ಚೇತರಿಸಿ­­ಕೊಂಡು ಹೂ ಬಿಡುವ ಹಂತಕ್ಕೆ ಬಂದಿದೆ. ಒಂದೆರಡು ಉತ್ತಮ ಮಳೆ­ಯಾದರೆ ಹಸಿ ತರಕಾರಿಯಾಗಿ ಉತ್ತಮ ಬೆಳೆ ದಕ್ಕುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಂತೆಯೇ ಉತ್ತಮ ಧಾರಣೆಯಿಂದ ಉತ್ತಮ  ಆದಾಯ­ವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. 4500 ಹೆಕ್ಟೇರ್ ಗುರಿ ಪೈಕಿ 2541 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

63000 ಹೆಕ್ಟೇರ್‍ ಪೈಕಿ 50814 ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದು್ದ, ಮೊದಲು ಬಿತ್ತನೆಯಾದ ರಾಗಿಯು ತೆನೆ ಬರುವ ಹಂತದಲ್ಲಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ಹೊಲಗಳಲ್ಲಿ ಕಳೆ ತೆಗೆಯುವ ಕೆಲಸ ಭರದಿಂದ ನಡೆ­ಯುತ್ತಿದೆ.

ಮಳೆ ಮುಂದುವರಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ನಷ್ಟದ ಪ್ರಮಾಣವೂ ಕೊಂಚ ಕಡಿಮೆ­ಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಚಿಕ್ಕಣ್ಣ.

ಮುಳಬಾಗಲು ತಾಲ್ಲೂಕಿನ ಬೈರ­ಕೂರು, ತಿಪ್ಪಸಂದ್ರ ಮೊದಲಾದ ಕಡೆ ಮಳೆ ಕಡಿಮೆಯಾಗಿರುವುದರಿಂದ ನೆಲ­ಗಡಲೆ ಸುಧಾರಣೆಯಾಗಿಲ್ಲ. ಅದೇ ತಾಲ್ಲೂ­ಕಿನ ತಾಯಲೂರು, ಆವಣಿ, ಬಂಗಾರಪೇಟೆ ತಾಲ್ಲೂಕಿನ ಕಾ್ಯಸಂಬಳಿ್ಳ ಮೊದಲಾದ ಕಡೆ ನೆಲಗಡಲೆ ಬಲಿ­ಯುತ್ತಿದೆ ಎಂದು ಹೇಳುತ್ತಾರೆ. ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‍ ಗುರಿ ಪೈಕಿ 6767 ಹೆಕ್ಟೇರ್‍ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆಯಾಗಿದೆ.

ರಾಗಿ ಪೈರುಗಳು ಈ ಹೊತ್ತಿಗೆ ಹೆಚ್ಚು ಬೆಳವಣಿಗೆ ಕಾಣಬೇಕಿತ್ತು. ಆದರೆ ಮಳೆಯೇ ಇಲ್ಲದ ಪರಿಣಾಮ ಮೇಲ­ಕ್ಕೇಳದ ಸಿ್ಥತಿ ತಲುಪಿದ್ದವು. ಮಳೆ ಸುರಿ­ಯುತ್ತಿರುವುದರಿಂದ ಚೇತರಿಕೆ ಕಾಣಿಸಿ­ಕೊಂಡಿದೆ.

ರಾಗಿ ನಡುವೆ ಅಂತರ ಬೇಸಾ­­ಯ­ದಲ್ಲಿ ಬೆಳೆದಿದ್ದ ಅವರೆ­ಯಿಂದಲೂ ತಕ್ಕಮಟ್ಟಿಗಿನ ಲಾಭ ಸಿಗ­ಬಹುದು ಎಂದು ತಾಲ್ಲೂಕಿನ ವಾನ­ರಾಶಿ ಗ್ರಾಮದ ರೈತ ನಾರಾಯಣ­ಸ್ವಾಮಿ ಹೇಳುತ್ತಾರೆ.

ಹಲವು ದಿನಗಳಿಂದ ಮಳೆಯಾಗು­ತ್ತಿದ್ದರೂ ಕೆರೆ, ಕುಂಟೆಗಳಿಗೆ ನೀರು ಬಂದಿಲ್ಲ. ಈಗಿನ ಮಳೆಯಿಂದ ಕೊಳವೆ­ಬಾವಿ­ಗಳಿಗೆ ಹೆಚ್ಚು ಪ್ರಯೋಜನವಿಲ್ಲ. ಉತ್ತಮ ಮಳೆಯಾದರೆ ಮಾತ್ರ ಕೊಳವೆ­­ಬಾವಿಗಳಲ್ಲಿ ನೀರು ಹೆಚ್ಚಾಗ­ಬಹು­ದಷ್ಟೆ. ಆದರೆ ಅಂಥ ಮಳೆಗಾಗಿ ಕಾಯು­ತ್ತಲೇ ಇದ್ದೇವೆ ಎನ್ನುತ್ತಾರೆ ಕೋಲಾರ ತಾಲ್ಲೂಕಿನ ತಿಮ್ಮಸಂದ್ರದ ರೈತ ಶ್ರೀನಿವಾಸ್‍,
ಅವರು ತಮ್ಮ  ಒಂದೂಕಾಲು ಎಕರೆ­­ಯಲ್ಲಿ ಟೊಮೆಟ ಬೆಳೆದಿದ್ದಾರೆ.  ಇತ್ತೀಚಿನ ಮಳೆಯಿಂದ ಅವರ ಕೊಳವೆ­ಬಾವಿಯಲ್ಲಿ ನೀರು ಹೆಚ್ಚಾಗಿಲ್ಲ. ಜೋರು ಮಳೆ ಬರದಿದ್ದರೆ ಬೇಸಿಗೆ ವೇಳೆಗೆ ನೀರಿನ ಅಭಾವ ಹೆಚ್ಚಾಗ­ಬಹುದು ಎಂಬುದು ಅವರ  ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.