ADVERTISEMENT

ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನ-ಕಟ್ಟಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 8:58 IST
Last Updated 9 ಏಪ್ರಿಲ್ 2013, 8:58 IST

ಕೋಲಾರ: ಎಳೆ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ಉತ್ತಮ ಅಭಿರುಚಿ ಮೂಡುತ್ತದೆ ಎಂದು ಕಲಾವಿದ ಅರವಿಂದ ಕಟ್ಟಿ ಅಭಿಪ್ರಾಯಪಟ್ಟರು.

ನಗರದ ಚಿನ್ಮಯ ಸತ್ಸಂಗ ಭವನದಲ್ಲಿ ಸೋಮವಾರದಿಂದ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿರುವ ವಸಂತ ಯೋಗ ಶಿಬಿರದ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗಾಭ್ಯಾಸ ಎಂಬುದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ ವ್ಯಕ್ತಿತ್ವ ಉನ್ನತಿಯೆಡೆಗೆ ಸಾಗುತ್ತದೆ ಎಂದರು.

ಶಾಲೆಯ ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಬಸವಳಿದಿರುವ ಮಕ್ಕಳಿಗೆ ಬೇಸಿಗೆ ಶಿಬಿರಗಳು ಹೊರೆಯಾಗಬಾರದು. ಅವರಲ್ಲಿ ಮತ್ತಷ್ಟು ಚೈತನ್ಯವನ್ನು ಮೂಡಿಸುವ ಸ್ಫೂರ್ತಿ ತಾಣಗಳಾಗಬೇಕು ಎಂದು ನುಡಿದರು.

ಚಿನ್ಮಯ ಸಾಂದೀಪನಿ ಆಶ್ರಮದ ದತ್ತಪಾದಾನಂಜಿ, ವಯಸ್ಸು ಮೀರಿದ ಬಳಿಕ ಕಲಿಕೆ ಎಂಬುದು ದುಸ್ತರವಾಗುತ್ತದೆ. ಎಂಥ ಸಲೀಸು ವಿಷಯವನ್ನೂ ಗ್ರಹಿಸಲು ಮೆದಳು ಮತ್ತು ಮನಸ್ಸು ನಿರಾಕರಿಸುತ್ತದೆ. ಇದನ್ನು ಅರಿತು ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಉತ್ತಮ ಅಭಿರುಚಿ, ಕಲಿಕೆಯ ಮನಃಸ್ಥಿತಿಯನ್ನು ಪೋಷಕರು ಮೂಡಿಸಬೇಕಿದೆ ಎಂದರು. ಟ್ರಸ್ಟ್‌ನ ಮುಖ್ಯ ಯೋಗಶಿಕ್ಷಕ ಸೋಮಶೇಖರಯ್ಯ ಮತ್ತು ಶ್ರೀಶೈಲನ್ ಉಪಸ್ಥಿತರಿದ್ದರು.

`ಭೋವಿ ಸಮಾಜ ಅಭಿವೃದ್ಧಿಗೆ ಸಂಕಲ್ಪ'
ಬಾಗೇಪಲ್ಲಿ
:  ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರಾದೇಶಿಕ ಪಕ್ಷದಿಂದ(ಕೆಜೆಪಿ) ಸ್ಪರ್ಧಿಸುತ್ತಿದ್ದೇನೆ ಎಂದು ಕರ್ನಾಟಕ ಭೋವಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆರ್.ಮುನಿರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.