ADVERTISEMENT

ಹಣ ರಾಜಕಾರಣ: ಶ್ರೀನಿವಾಸಗೌಡ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:30 IST
Last Updated 5 ಫೆಬ್ರುವರಿ 2011, 6:30 IST

ಕೋಲಾರ: ಕಳೆದ ಮೂರು ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಶಾಸಕ ಆರ್.ವರ್ತೂರು ಪ್ರಕಾಶರು ಕೇವಲ ಹಣಕಾಸಿನ ರಾಜಕಾರಣ ಮಾಡುತ್ತಾ ಯುವಕರನ್ನು ಹಾದಿತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಟೀಕಿಸಿದರು.

ತಾಲೂಕಿನ ತಲಗುಂದ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೆಂಬಲಿಗರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರು ಸರ್ಕಾರಕ್ಕೆ ಬೆಂಬಲವನ್ನು ಕೊಡುವ ಸಂದರ್ಭದಲ್ಲಿ ರೆಡ್ಡಿಗಳಿಂದ ಹಣ ಪಡೆದು ಅಭಿವೃದ್ಧಿಯಾಗಿದ್ದಾರಷ್ಟೆ.ಆದರೆ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ.ಹಣದಿಂದಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳುವ ಶಾಸಕರು ಗ್ರಾಮೀಣ ಪ್ರದೇಶಗಳಲ್ಲಿ ಜನ ಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುತ್ತಿರುವುದರ ಕಡೆ ಕಣ್ಣು ಹಾಯಿಸಲಿ ಎಂದು ಸಲಹೆ ನೀಡಿದರು.

ಬೈರೇಗೌಡರಾಗಲಿ, ಕೃಷ್ಣಬೈರೇಗೌಡರಾಗಲಿ, ನಾನಾಗಲಿ ಎಂದೂ ಜಾತಿ ರಾಜಕಾರಣ ಮಾಡಿಲ್ಲ.ಆದರೆ ಈಗಿನ ಶಾಸಕರು ಪ್ರತಿಯೊಂದು ಗ್ರಾಮದಲ್ಲೂ ಜಾತಿಗಳನ್ನು ವಿಂಗಡಣೆ ಮಾಡುವ ಮೂಲಕ ಕಲುಷಿತಗೊಳಿಸಿದ್ದಾರೆ, ಮುಂದಿನ ದಿನಗಳಲ್ಲಿ ಇಂಥ ಕಲುಷಿತ ರಾಜಕಾರಣಕ್ಕೆ ಯುವಕರು ಅವಕಾಶ ಕಲ್ಪಿಸಬಾರದೆಂದು ಎಂದರು. ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಸಾಬೀರ್‌ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಳ ಸೋಮಣ್ಣ ಮಾತನಾಡಿದರು.

ಜಿ.ಪಂ.ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ಪೆಮ್ಮಶೆಟ್ಟಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್, ನಾಗನಾಳ ಗೋಪಾಲಕೃಷ್ಣ, ಮೂರಾಂಡಹಳ್ಳಿ ಗೋಪಾಲ್, ಧನಮಟ್ನಹಳ್ಳಿ ನಾರಾಯಣಸ್ವಾಮಿ, ಯುವ ಮುಖಂಡ ಪ್ರಸನ್ನಕುಮಾರ್, ಪ್ರವೀಣ್ ಹಾಜರಿದ್ದರು.

ಸೇರ್ಪಡೆ: ಇದೇ ಸಂದರ್ಭದಲ್ಲಿ ರಾಮಕೃಷ್ಣ, ಖಾಜಾ, ಅಪ್ಜಲ್‌ಪಾಷ, ಶಫೀವುಲ್ಲಾ, ಶ್ರೀನಿವಾಸ್, ಆದಿತ್ಯ, ಟೈಲರ್‌ರೆಡ್ಡಿ, ಮಹಬೂಬ್‌ಪಾಷ, ಅಯಾಜ್‌ಪಾಷ, ಸಿಕಂಧರ್‌ಪಾಷ,  ಹೈದರಾಲಿ, ಮಹದೇವ್, ನರಸಿಂಹ, ದೇವರಾಜ್, ಟಿ.ಬಾಬು, ಪ್ರಕಾಶ್, ಟಿ.ಎ.ಮಹಬೂಬ್‌ಪಾಷ, ಎಸ್. ಯಾರಬ್‌ಪಾಷ, ಹೆಚ್.ಇನಾಯತ್‌ತುಲ್ಲಾ, ಸುಬ್ಬು, ಚಿರಂಜೀವಿ, ಆನಂದ್, ಮುನಿರಾಜು, ಬಾಬಾ, ಶಂಕರ್, ನಿರಂಜನ್, ಶಿವ, ಗೋವಿಂದ, ಅಮೀರ್‌ಜಾನ್, ಸಾಬುಸಾಬಿ ಮತ್ತಿತರರು ಜೆಡಿಎಸ್‌ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.