ADVERTISEMENT

ಮಾಲೂರು: ಗಾಂಜಾ ಮಾರಾಟ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2023, 13:20 IST
Last Updated 13 ನವೆಂಬರ್ 2023, 13:20 IST
ವೆಂಕಟೇಶ್
ವೆಂಕಟೇಶ್   

ಮಾಲೂರು: ಸುಮಾರು ₹ 50 ಸಾವಿರಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಗಾಂಜಾವನ್ನು ಯುವಕರಿಗೆ ಮಾರಾಟ ಮಾಡಲು ತಂದಿದ್ದ ಆರೋಪಿಗಳನ್ನು ಇಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಆರೋಪಿಗಳನ್ನು ಚಿಕ್ಕಾಪುರ ಗ್ರಾಮದ ವೆಂಕಟೇಶ್, ಚೂಡಗೊಂಡಹಳ್ಳಿ ಎನ್. ಹರೀಶ್, ಕಾಡದೇನಹಳ್ಳಿಯ ನಿಖಿಲ್ ಎಂದು ಗುರುತಿಸಲಾಗಿದೆ. ಈ ಮೂವರೂ ಬೊಪ್ಪನಹಳ್ಳಿ ಗ್ರಾಮದ ರೈಲ್ವೆ ಸೇತುವೆ ಬಳಿಯ ನೀಲಗಿರಿ ತೋಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 

ಖಚಿತ ಮಾಹಿತಿಯ ಮೇರೆಗೆ ಇನ್‌ಸ್ಪೆಕ್ಟರ್ ವಸಂತ್ ಮತ್ತು ತಂಡ ದಾಳಿ ನಡೆಸಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ADVERTISEMENT
ಎನ್. ಹರೀಶ್
ನಿಖಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.