ADVERTISEMENT

ಬಂಗಾರಪೇಟೆ | ಲಾರಿ, ಟಿಪ್ಪರ್ ನಡುವೆ ಅಪಘಾತ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:27 IST
Last Updated 2 ಮೇ 2025, 16:27 IST
ಹನುಮಂತ
ಹನುಮಂತ   

ಬಂಗಾರಪೇಟೆ: ಬಂಗಾರಪೇಟೆ ಮತ್ತು ಟೇಕಲ್ ಮುಖ್ಯ ರಸ್ತೆಯ ಗೊರವನಹಳ್ಳಿ ಬಳಿ ಶುಕ್ರವಾರ ಟಿಪ್ಪರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಣಿಂಬೆಲೆ ಗ್ರಾಮದ ಹನುಮಂತ (55) ಮತ್ತು ಹುಲಿಬೆಲೆಯ ಎಚ್.ವಿ.ನಾಗರಾಜ (35) ಮೃತರು. ಟಿಪ್ಪರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬೂದಿಕೋಟೆ ಪೋಲಿಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಸುನೀಲ್ ಐರೋಡಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT
ಎಚ್‌.ವಿ.ನಾಗರಾಜ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.