ADVERTISEMENT

ಕೋಲಾರ | ಅಕ್ಷಯ ತೃತೀಯ; ಚಿನ್ನ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:16 IST
Last Updated 30 ಏಪ್ರಿಲ್ 2025, 16:16 IST
ಕೋಲಾರದ ಆಭರಣ ಅಂಗಡಿಯೊಂದರಲ್ಲಿ ಚಿನ್ನದ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು
ಕೋಲಾರದ ಆಭರಣ ಅಂಗಡಿಯೊಂದರಲ್ಲಿ ಚಿನ್ನದ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು    

ಕೋಲಾರ: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ಭಾವನೆಯಲ್ಲಿ ಹಲವರು ಬುಧವಾರ ಆಭರಣ ಅಂಗಡಿಗಳತ್ತ ಮುಗಿಬಿದ್ದಿದ್ದರು.

ಚಿನ್ನದ ಬೆಲೆ ದುಬಾರಿಯಾಗಿದ್ದರೂ ಲೆಕ್ಕಿಸದ ಸಾರ್ವಜನಿಕರು ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ, ನಗರದ ಆಭರಣ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಕೆಲವು ಅಂಗಡಿ ಮಾಲೀಕರು ಮಳಿಗೆ ಮುಂದೆ ಪೆಂಡಾಲ್ ನಿರ್ಮಿಸಿದ್ದರು. ತಂಪು ಪಾನೀಯ, ನೀರು, ಕಾಫಿ, ಟೀ, ಸಿಹಿ ವ್ಯವಸ್ಥೆ ಮಾಡಿದ್ದರು. ಜೊತೆಗೆ ವಿವಿಧ ಕೊಡುಗೆ ಮೂಲಕ ಗ್ರಾಹಕರನ್ನು ಸೆಳೆಯಲು ಪೈಪೊಟಿಗೆ ಬಿದ್ದಿದ್ದರು

ADVERTISEMENT

‘ಪ್ರತಿ ವರ್ಷವೂ ಅಕ್ಷಯ ತೃತೀಯ ದಿನದಂದು ಖರೀದಿ ವಹಿವಾಟು ಹೆಚ್ಚಿರುವುದು ಮಾಮೂಲಿಯಾಗಿದೆ. ಈ ವರ್ಷ ಇನ್ನೂ ಹೆಚ್ಚಿನ ಜನ ಬಂದಿದ್ದಾರೆ’ ಎಂದು ಆಭರಣ ಮಳಿಗೆ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.