ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಕಾಂ ಪದವಿ ಪರೀಕ್ಷೆಯಲ್ಲಿ ನಗರದ ಸಹ್ಯಾದ್ರಿ ಪದವಿ ಕಾಲೇಜಿನ ನಿರ್ಮಲಾ ಎನ್. ಶೇ 96.76ಅಂಕಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ವೇದಿಕಾ ನಿಧಿ ರೆಡ್ಡಿ 5 ನೇ ರ್‍ಯಾಂಕ್, ಬಿಸಿಎ ವಿಭಾಗದಲ್ಲಿ ಮೇಘನಾ ಆರ್.ಶೇ 97.17 ಅಂಕಗಳೊಂದಿಗೆ ಮೂರನೇ ರ್‍ಯಾಂಕ್ ಗಳಿಸಿದ್ದಾರೆ. ದ್ವಿತೀಯ ಪಿಯುಸಿ ಸುಧಾರಣೆ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ದೀಕ್ಷಾ ಕೆ.ಆರ್. 591 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಉದಯಕುಮಾರ್, ಪದವಿ ವಿಭಾಗದ ಪ್ರಾಂಶುಪಾಲ ಬಿ.ಬದರೀನಾಥ್, ಪಿಯು ವಿಭಾಗದ ಪ್ರಾಂಶುಪಾಲ ಜಿ.ವಿ.ವಿನಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.