ADVERTISEMENT

‌ವಿಜಯಪುರಕ್ಕೆ ನೇರ ಬಸ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:47 IST
Last Updated 3 ಸೆಪ್ಟೆಂಬರ್ 2021, 3:47 IST
ಶ್ರೀನಿವಾಸಪುರದ ಸಪ್ತಸ್ವರ ಸಂಗೀತ ವಿದ್ಯಾಲಯದಲ್ಲಿ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಿಸಲಾಯಿತು. ಪರಿಷತ್ತಿನ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಮಾಯಾ ಬಾಲಚಂದ್ರ, ಉಪನ್ಯಾಸಕಿ ಕಮಲಾ ಹೆಗಡೆ, ಶಿಕ್ಷಕಿ ಜಯಲಕ್ಷ್ಮಿ, ಶಿಕ್ಷಕ ಅರುಣ್ ಕುಮಾರ್ ಹಾಜರಿದ್ದರು

ಕೆಜಿಎಫ್‌: ನಗರದಿಂದ ವಿಜಯಪುರಕ್ಕೆ ನೇರ ಬಸ್‌ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸೆ. 3ರಿಂದ ಪ್ರಾರಂಭಿಸಲಿದೆ.

ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ವಿಜಯಪುರ ಸೇವೆಯನ್ನು ಕೋವಿಡ್ ಕಾರಣದಿಂದಾಗಿ ನಿಲ್ಲಿಸ
ಲಾಗಿತ್ತು. ಬೆಮಲ್‌ ಉತ್ತರ ಕರ್ನಾಟಕ ಸಂಘವು ಪುನಃ ಬಸ್ ಸಂಚಾರ ಪ್ರಾರಂಭಿಸುವಂತೆ ಮನವಿ ಸಲ್ಲಿಸಿತ್ತು.

ಈ ಮನವಿ ಪುರಸ್ಕರಿಸಿರುವ ಅಧಿಕಾರಿಗಳು ಬಸ್ ಸೇವೆಯನ್ನು ಮತ್ತೆ ಆರಂಭಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕೆಜಿಎಫ್‌ ಬಿಡುವ ರಾಜ ಹಂಸ ಬಸ್‌ ಮುಂಜಾನೆ 5 ಗಂಟೆಗೆ ವಿಜಯಪುರಕ್ಕೆ ತಲುಪಲಿದೆ. ನಂತರ ಸಂಜೆ 5ಕ್ಕೆ ವಿಜಯಪುರ ಬಿಟ್ಟು ಬೆಳಿಗ್ಗೆ 7 ಗಂಟೆಗೆ ಕೆಜಿಎಫ್ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.