ADVERTISEMENT

ಎಸ್ಎಸ್ಎಲ್‌ಸಿ, ಪಿಯುಸಿ ಪ್ರತಿಭಾವಂತರಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:54 IST
Last Updated 8 ಜೂನ್ 2025, 15:54 IST
ವೇಮಗಲ್ ಹೋಬಳಿ ಒಕ್ಕಲಿಗರ ಸಂಘದ ವತಿಯಿಂದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು 
ವೇಮಗಲ್ ಹೋಬಳಿ ಒಕ್ಕಲಿಗರ ಸಂಘದ ವತಿಯಿಂದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು    

ವೇಮಗಲ್: ಇತ್ತೀಚೆಗೆ ಪ್ರಕಟಗೊಂಡ ಎಸ್ಎಸ್ಎಲ್‌ಸಿ ಮತ್ತು ಪಿಯು ಪರೀಕ್ಷಾ ಫಲಿತಾಂಶದಲ್ಲಿ ಶೇ 90ರಷ್ಟು ಅಂಕ ಪಡೆದ ಹೋಬಳಿ ವ್ಯಾಪ್ತಿಯ ಚನ್ನಸಂದ್ರ, ಕಡಗಟ್ಟೂರು ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇಮಗಲ್ ಹೋಬಳಿಯ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಈ ವೇಳೆ ಮಾತನಾಡಿದ ವೇಮಗಲ್ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಡಿ. ರಾಮಚಂದ್ರಗೌಡ, ‘ಹೋಬಳಿಯಲ್ಲಿ ಇರುವ ನಮ್ಮ ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ತಂದೆ ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತಂದುಕೊಡಬೇಕು’ ಎಂದು ಆಶಿಸಿದರು. 

‘ನಮ್ಮ ವ್ಯಾಪ್ತಿಯಲ್ಲಿ ಇರುವ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ನಮ್ಮ ಸಂಘದಿಂದ ಆರ್ಥಿಕ ಸಹಾಯ ಮಾಡಲಾಗುವುದು’ ಎಂದರು.

ADVERTISEMENT

ಈ ವೇಳೆ ನಿರ್ದೇಶಕ ಪುರಳ್ಳಿ ಶ್ರೀನಿವಾಸ್, ಮೆಡಿಕಲ್ ಮುನಿರಾಜು, ಚಂಜಿ ಮಲೆ ಮುನಿ ಭೈರಪ್ಪ, ಕ್ಯಾಲನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಕಾರ್ಯಾಧ್ಯಕ್ಷ ಸಿ.ವಿ. ಪ್ರಕಾಶ್, ಕುರುಗಲ್ ಮಂಜುನಾಥ್, ಕಲ್ವಂಜಲಿ ರಾಮಚಂದ್ರ, ರಾಧಾಕೃಷ್ಣ, ದೇವರಾಜ್, ಕುರುಗಲ್ ಸಂದೀಪ್, ವೆಂಕಟೇಶ್, ಗೌಡ, ಪೇಪರ್ ಮಂಜುನಾಥ್, ಚಂದ್ರಶೇಖರ್, ವೆಂಕಟ್ ರೆಡ್ಡಿ, ಮಂಜುನಾಥ್ ಹಾಗೂ ಉಪಸ್ಥಿತರಿದ್ದರು.

ವೇಮಗಲ್ ಹೋಬಳಿ ಒಕ್ಕಲಿಗರ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.