ಕೋಲಾರ: ಮಾಲೂರು ತಾಲ್ಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಸೊಣ್ಣಪ್ಪ ಅವರ ಹುಣಸೆ ತೋಪಿನಲ್ಲಿ ಹಣ ಪಣಕ್ಕಿಟ್ಟು ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿದ್ದ 9 ಮಂದಿಯನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಲೂರು ತಾಲ್ಲೂಕಿನ ಜಕ್ಕಸಂದ್ರದ ಸುನಿಲ್ ಕುಮಾರ್ (26), ಕೋಲಾರ ತಾಲ್ಲೂಕಿನ ರಾಮಸಂದ್ರದ ಎಚ್.ಆನಂದ (27), ಮಾಲೂರು ತಾಲ್ಲೂಕಿನ ಊರಗುರ್ಕಿಯ ನಾರಾಯಣಸ್ವಾಮಿ(50), ಕೋಲಾರ ತಾಲ್ಲೂಕಿನ ರಾಮಸಂದ್ರದ ಕೆ.ಎನ್.ಭರತ್ ಕುಮಾರ್ (27), ಮಾಲೂರು ತಾಲ್ಲೂಕಿನ ಭುವನಹಳ್ಳಿಯ ಬಿ.ಟಿ.ಮಂಜುನಾಥ್ (37), ವಕ್ಕಲೇರಿಯ ವಿ.ವೇಣುಗೋಪಾಲ್ (34), ಬಂಗಾರಪೇಟೆಯ ದೇಶಿಹಳ್ಳಿಯ ಎಂ.ಎಸ್.ಸಿದ್ದೇಶ್ ಕುಮಾರ್ (29), ಭುವನಹಳ್ಳಿಯ ವಿ.ಲಕ್ಷ್ಮಣ್ (35), ಮೈಲಾಂಡಹಳ್ಳಿಯ ಎಂ.ಎನ್.ಮುರಳಿ (34) ಬಂಧಿತ ಆರೋಪಿಗಳು. ₹ 4,200 ನಗದು ಹಾಗೂ ಎರಡು ಕೋಳಿ ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಮಾಲೂರು ಠಾಣೆ ಇನ್‌ಸ್ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.