ADVERTISEMENT

ಬೇತಮಂಗಲ: ಚನ್ನಕೇಶವ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:45 IST
Last Updated 13 ಏಪ್ರಿಲ್ 2025, 14:45 IST
ಬೇತಮಂಗಲ ಸಮೀಪ ರಾಮಸಾಗರದಲ್ಲಿ ಚನ್ನಕೇಶವ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು
ಬೇತಮಂಗಲ ಸಮೀಪ ರಾಮಸಾಗರದಲ್ಲಿ ಚನ್ನಕೇಶವ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು   

ಬೇತಮಂಗಲ: ರಾಮಸಾಗರ ಚನ್ನಕೇಶವ ರಥೋತ್ಸವ ಶನಿವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವ ಒಂಬತ್ತು ದಿನಗಳ ಕಾಲ ನಡೆಯಲಿದೆ. ಶನಿವಾರ ಶ್ರದ್ಧಾ ಭಕ್ತಿಯಿಂದ ರಥೋತ್ಸವ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಹೋಮ ನಡೆಯಿತು. ರಥೋತ್ಸವದಲ್ಲಿ ಭಕ್ತರಿಗೆ ಹೆಸರುಬೇಳೆ, ಪಾನಕ ಹಾಗೂ ಮಜ್ಜಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ರಾಮಸಾಗರ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ಯುವಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.