ADVERTISEMENT

ಕೋಲಾರ | ವಿದ್ಯುತ್ ವ್ಯತ್ಯಯ ನಾಳೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:19 IST
Last Updated 30 ಮೇ 2025, 16:19 IST

ಕೋಲಾರ: ಬೆ.ವಿ.ಕಂ ಕೋಲಾರ ಗ್ರಾಮೀಣ ಉಪ ವಿಭಾಗದ ನರಸಾಪುರ ಶಾಖೆ ವ್ಯಾಪ್ತಿಯ ಚುಂಚುದೇನಹಳ್ಳಿ ಗ್ರಾಮದಲ್ಲಿ ಹೊಸ ಮಾರ್ಗವನ್ನು ನಿರ್ಮಿಸಲು ಎಫ್-24 ನಾಗಲಾಪುರ ಫೀಡರ್‌ಗೆ ಒಳಪಡುವ ಕಾಜಿಕಲ್ಲಹಳ್ಳಿ, ಕೆಂದಟ್ಟಿ, ಅರಬ್ಬಿಕೊತ್ತನೂರು, ಚಿಕ್ಕಆಯೂರು, ಚುಂಚುದೇನಹಳ್ಳಿ, ಚೆಲುವನಹಳ್ಳಿ, ನಾಗಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಶನಿವಾರ (ಮೇ 31) ಬೆಳಿಗ್ಗೆ 8 ರಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ವಿದ್ಯುತ್ ಅಡಚಣೆ ಸಮಯದಲ್ಲಿ ಗ್ರಾಹಕರು ಬೆ.ವಿ.ಕಂ ಜೊತೆ ಸಹಕರಿಸಬೇಕೆಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT