ಬಂಗಾರಪೇಟೆ: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಲಾರದ ಮಂಜುನಾಥ ಮತ್ತು ಹೊಸಕೋಟೆ ವಾಸಿ ಮುಖೇಶ್ ಬಂಧಿತರು. ₹2ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂ.19ರಂದು ತಮ್ಮೇನಹಳ್ಳಿ ಗ್ರಾಮದ ಬಾಬು ಎಂಬುವರು ತಮ್ಮ ತೋಟದ ಮನೆಯಲ್ಲಿ ಕಳವು ಆಗಿರರುವ ಬಗ್ಗೆ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಂಗಾರಪೇಟೆ ಪಿಐ ಆರ್.ದಯಾನಂದ್, ಎ.ಎಸ್.ಐ ವಿಜಯ್‌ಕುಮಾರ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.