ADVERTISEMENT

ಕೋಮುಲ್‌: ಕೆವೈಎನ್‌ ಅವಿರೋಧ ಆಯ್ಕೆಗೆ ಆಕ್ಷೇಪ‍

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:41 IST
Last Updated 23 ಜೂನ್ 2025, 14:41 IST
ಮಾಲೂರು ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಟಿಬಿ.ಕೃಷ್ಣಪ್ಪ ಮಾತನಾಡಿದರು.
ಮಾಲೂರು ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಟಿಬಿ.ಕೃಷ್ಣಪ್ಪ ಮಾತನಾಡಿದರು.   

ಮಾಲೂರು: ಎರಡು ಭಾರಿ ಕೋಚಿಮುಲ್ ನಿರ್ದೇಶಕರಾಗಿ ಅಧ್ಯಕ್ಷರಾಗಿದ್ದ ಶಾಸಕ ಕೆ.ವೈ.ನಂಜೇಗೌಡ ಅವರು ವಾಮಮಾರ್ಗದಲ್ಲಿ ಮೂರನೇ ಬಾರಿಗೆ ನಿದೇರ್ಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಆರೋಪಿಸಿದರು.

ಪಟ್ಟಣದಲ್ಲಿ ತಾಲ್ಲೂ ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ತಾಲೂಕಿನಲ್ಲಿ ಮತ ಹಾಕದ 18 ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಶಾಸಕರು, ಅಧಿಕಾರಿಗಳ ಮೇಲೆ ಒತ್ತಡ ಏರಿ ಸೂಪರ್‌ಸೀಡ್‌ ಮಾಡಿಸಿದ್ದಾರೆ. ಟೇಕಲ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ.ವೈ.ನಂಜೇಗೌಡ ಅವರು ಆರ್ಜಿ ಹಾಕಿದ್ದರು. ಅವರ ವಿರುದ್ಧ ಎನ್‌ಡಿಎ ಅಭ್ಯರ್ಥಿಯಾಗಿ ಡಾ.ಪ್ರಸನ್ನ ಆದ ನಾನು ನಾಮಪತ್ರ ಸಲ್ಲಿಸಿದ್ದೆ. ಟೇಕಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ನಂಜೇಗೌಡ ಅವರು ಚುನಾವಣೆ ನಡೆದರೆ ಸೋಲುವ ಭೀತಿ ಹೊಂದಿದ್ದರು. ವಾಮ ಮಾರ್ಗದಲ್ಲಾದರೂ ಗೆಲ್ಲಲೇಬೇಕೆಂದು ತೀರ್ಮಾನಿಸಿ ಸೂಚಕರಾಗಿದ್ದವರಿಗೆ ಅಧಿಕಾರ ಮತ್ತು ಹಣ ತೋರಿಸಿ ಕಚೇರಿಗೆ ಬರದ ಹಾಗೆ ಮಾಡುವ ಮೂಲಕ ಅರ್ಜಿ ಉರ್ಜಿತವಾಗದಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಈಗಾಗಲೇ ಮೆಗಾ ಡೇರಿ, ಸೋಲಾರ್‌ ಪ್ಲಾಂಟ್ ನಿರ್ಮಾಣ ಸೇರಿದಂತೆ ಐಸ್ ಕ್ರೀಂ ಪ್ಲಾಂಟ್ ಕಾಮಗಾರಿ ನಡೆಯುತ್ತಿವೆ. ಇದರ ಸಾಲ ತೀರಿಸಲು ಕೆಲಸ ಮಾಡಬೇಕಾಗಿದೆ ಎಂದರು.

ADVERTISEMENT

ಮಾಲೂರಿನಲ್ಲಿ ನಿರ್ಮಾಣ ಮಾಡಿರುವ ಕ್ಯಾಂಪ್ ಕಚೇರಿ ನಿರ್ಮಾಣದ ಮೇಲೆ ಹಲವು ಆರೋಪಗಳು ಇವೆ. ₹26 ಲಕ್ಷ ವೆಚ್ಚದಲ್ಲಿ ಒಂದು ಅಂತಸ್ತು ನಿರ್ಮಾಣ ಮಾಡಲಾಗಿದೆ. ಇನ್ನೊಂದು ಅಂತಸ್ತು ನಿರ್ಮಾಣ ಮಾಡಲು ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ₹34ಲಕ್ಷ ಸಂಗ್ರಹ ಮಾಡಲಾಗಿದೆ.

ಮೂರನೇ ಅಂತಸ್ತು ನಿರ್ಮಾಣ ಮಾಡಿ ನಂಜೇಗೌಡ ಅವರ ಕಚೇರಿ ಎಂದು ಫಲಕ ಹಾಕಲಾಗಿದೆ. ಕಟ್ಟಡ ಪಕ್ಕದಲ್ಲಿ ಪಾರ್ಕ್ ಮಾಡಲಾಗಿದೆ. ಪುರಸಭೆ ಹಾಗೂ ಒಕ್ಕೂಟದಿಂದಲೂ ಹಣ ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ತಾಲ್ಲೂ ಘಟಕದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ, ನಂಜೇಗೌಡ ಅವರು ಮತ ಹಾಕದ 6 ಹಾಲು ಉತ್ಪಾದಕರ ಸಂಘಗಳನ್ನು ಮತ್ತೆ ಸೂಪರ್‌ ಸೀಡ್‌ ಮಾಡಿಸಿದ್ದಾರೆ. ಅಧಿಕಾರ ಮತ್ತು ಹಣ ಬಳಸಿಕೊಂಡು ಮತದಾರರನ್ನು ಗೋವ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಪ್ರಮೇಯ ಏನಿತ್ತು ಎಂದು ಪ್ರಶ್ನಿಸಿದರು.

ಕಸಬಾ ಕೇತ್ರದ ಅಭ್ಯರ್ಥಿ ಎಟ್ಟಿಕೊಡಿ ಕೃಷ್ಣರೆಡ್ಡಿ, ಜಿ.ಪಂ ಮಾಜಿ ಉಪಾಧ್ಯಕ್ಷ ಗೋಪಾಲ್ ರೆಡ್ಡಿ, ಸೋಮಣ್ಣ, ಸಂತೋಷ್ ಬಾಬು, ಅಧಿಕಾರಟ್ಟಿ ಬಾಬು, ವೇಣು ಗೋಪಾಲ್, ಒಬಿಸಿ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ್ ಯಾದವ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.